ರಸ್ತೆ ಬದಿ ಪೆಟ್ರೋಲ್ ಲಾರಿ ಪಲ್ಟಿ

ರಸ್ತೆ ಬದಿ ಪೆಟ್ರೋಲ್ ಲಾರಿ ಪಲ್ಟಿ

ತುಮಕೂರು, ಏ. 20, ನ್ಯೂಸ್ ಎಕ್ಸ್ ಪ್ರೆಸ್: ಇಂದು ಬೆಳಿಗ್ಗೆ ಇಂಧನ ತುಂಬಿದ ಲಾರಿಯೊಂದು ರಸ್ತೆಪಕಕ್ಕೆ ಉರುಳಿ ಬಿದ್ದಿರುವ ಘಟನೆ ಮಧುಗಿರಿ ತಾಲೂಕಿನ ಯಾಕಾರ್ಲಹಳ್ಳಿ ಗ್ರಾಮದ ಬಳಿ ನಡೆದಿದೆ. ಯಾಕಾರ್ಲಹಳ್ಳಿ- ಕಡಗತ್ತೂರು ಮಧ್ಯ ಭಾಗದಲ್ಲಿ ಬೆಳಿಗ್ಗೆ 11ರ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿ ಪೆಟ್ರೋಲ್ ಸಾಗಿಸುತ್ತಿದ್ದ ಟ್ಯಾಂಕರ್ ಬಿದಿದ್ದೆ.

ಇದೇ ವೇಳೆ ತಕ್ಷಣ ಗ್ರಾಮಸ್ಥರು ಚೊಂಬು, ಬಿಂದಿಗೆ, ನೀರಿನ ಕ್ಯಾನ್ ತಂದು ನಾಮುಂದು ನೀಮುಂದು ಸೋರಿಕೆಯಾಗುತ್ತಿದ್ದ ಪೆಟ್ರೋಲ್ ತುಂಬಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಇನ್ನು ಸ್ಥಳಕ್ಕೆ ವಿಷಯ ತಿಳಿದುಕೊಂಡು ಬಂದ, ಅಗ್ನಿಶಾಮಕ ದಳ ಹಾಗೂ ಪೊಲೀಸರು ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos