ನಾಲ್ವರು ಸರ್ಕಾರಿ ಅಧಿಕಾರಿಗಳ ಮೇಲೆ ಇಂದು ಎಸಿಬಿ ದಾಳಿ

ನಾಲ್ವರು ಸರ್ಕಾರಿ ಅಧಿಕಾರಿಗಳ ಮೇಲೆ ಇಂದು ಎಸಿಬಿ ದಾಳಿ

ಬೆಂಗಳೂರು, ಮಾ.19, ನ್ಯೂಸ್ ಎಕ್ಸ್ ಪ್ರೆಸ್ : ರಾಜ್ಯದ ನಾಲ್ವರು ಸರ್ಕಾರಿ ಅಧಿಕಾರಿಗಳ ಮೇಲೆ ಇಂದು ಎಸಿಬಿ ದಾಳಿ ನಡೆಸಿದೆ. ರಾಜ್ಯಾದ್ಯಂತ 10 ಸ್ಥಳಗಳಲ್ಲಿ ವಿವಿಧ ಎಸಿಬಿ ತಂಡಗಳಿಂದ ಕಾರ್ಯಾಚರಣೆ ನಡೆಸಲಾಯಿತು. ನಾಲ್ವರು ಅಧಿಕಾರಿಗಳು ಅಸಮತೋಲನ ಆಸ್ತಿ-ಪಾಸ್ತಿಗಳನ್ನು ಹೊಂದಿರುವ ಬಗ್ಗೆ ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ದಾಖಲಿಸಿದ್ದಾರೆ. ಬಿಡಿಎ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ: 5 ಕೋಟಿ ನಗದು ಪತ್ತೆ ಅವರಿಗೆ ಸಂಬಂಧಿಸಿದ 10 ಸ್ಥಳಗಳ ಮೇಲೆ ಇಂದು ದಾಳಿ ನಡೆಸಲಾಗಿದೆ. ಶೋಧನಾ ಕಾರ್ಯವು ಮುಂದುವರೆದಿದ್ದು ಈವರೆಗೆ ಶೋಧನೆ ನಡೆಸಲಾದ ಜಾಗಗಳ ಮತ್ತು ಸರ್ಕಾರಿ ಅಧಿಕಾರಿಗಳ ಮಾಹಿತಿ ಈ ಕೆಳಕಂಡಂತಿರುತ್ತವೆ.

ಸತೀಶ್ ಬಿ.ಸಿ, ಸಹಕಾರ ಸಂಘಗಳ ಅಪರ ನಿಬಂಧಕರು, ಸಹಕಾರ ಇಲಾಖೆ, ಕೇಂದ್ರ ಕಛೇರಿ, ಅಲಿ ಅಸ್ಕರ್ ರಸ್ತೆ, ಬೆಂಗಳೂರು. ಇವರ ಬೆಂಗಳೂರು ನಗರದ ವಾಸದ ಮನೆ, ಹಾಗೂ ಇವರ ಸಂಬಂಧಿಕರ ಬೆಂಗಳೂರು ನಗರದಲ್ಲಿನ ವಾಸದ ಮನೆ.

ಶರದ್ ಗಂಗಪ್ಪ ಇಜ್ರಿ, ಉಪ ನಿರ್ದೇಶಕರು, ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ದಿ ನಿಗಮ, ವಿಜಯಪುರ (ಕೆ.ಆರ್.ಐ.ಡಿ.ಎಲ್ ) ಇವರ ವಿಜಯಪುರ ನಗರದಲ್ಲಿನ ನಿವಾಸ, ಹಾಗೂ ಇವರು ಕರ್ತವ್ಯ ನಿರ್ವಹಿಸುತ್ತಿರುವ ಉಪ ನಿರ್ದೇಶಕರ ಕಛೇರಿ, ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ದಿ ನಿಗಮ, ವಿಜಯಪುರ, ಮಂಗಳೂರಿನಲ್ಲಿ ಲಂಚ ಪಡೆಯುವಾಗಲೇ ಎಸಿಬಿ ಬಲೆಗೆ ಬಿದ್ದ ಪ್ರಾಜೆಕ್ಟ್ ಇಂಜಿನಿಯರ್

ಪ್ರಕಾಶ್ ಗೌಡ ಕುದರಿಮೊಟಿ, ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ ಮುಂಡರಗಿ, ಗದಗ ಜಿಲ್ಲೆ. ಇವರ ಮುಂಡರಗಿಯಲ್ಲಿನ ಎರಡು ವಾಸದ ಮನೆ, ಹಾಗು ಇವರು ಕಾರ್ಯನಿರ್ವಹಿಸುತ್ತಿರುವ ರೈತ ಸಂಪರ್ಕ ಕೇಂದ್ರ, ಮಂಡರಗಿ ವಿಜಯಪುರ ಜಿಲ್ಲೆ. ಬೆಂಗ್ಳೂರಲ್ಲಿ ಎಸಿಬಿಗೆ ಸಿಕ್ಕಿದ್ದು ಕೇಜಿಗಟ್ಟಲೆ ಚಿನ್ನ, ಮೂಟೆಗಟ್ಟಲೆ ದುಡ್ಡು

ಶ್ರೀ.ಮಂಜುನಾಥ್ ಎಸ್.ಬಿ, ಸಹಾಯಕ ಕಂದಾಯ ಅಧಿಕಾರಿ, ಜೆ.ಬಿ.ನಗರ ಉಪ ವಿಭಾಗ, ಬಿಬಿಎಂಪಿ, ಬೆಂಗಳೂರು. ಇವರ ಬೆಂಗಳೂರು ನಗರದಲ್ಲಿನ ನಿವಾಸ ಮತ್ತು ಚೆನ್ನರಾಯಪಟ್ಟಣದಲ್ಲಿನ ಇವರ ಸಂಬಂಧಿಕರ ಮನೆ ಹಾಗೂ ಇವರು ಕರ್ತವ್ಯ ನಿರ್ವಹಿಸುತ್ತಿರುವ ಸಹಾಯಕ ಕಂದಾಯ ಅಧಿಕಾರಿಗಳ ಕಛೇರಿ, ಜೆ.ಬಿ.ನಗರ ಉಪ ವಿಭಾಗ, ಬಿಬಿಎಂಪಿ, ಬೆಂಗಳೂರು. ಕರ್ನಾಟಕ ರಾಜ್ಯ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯ ವಿವಿಧ ತಂಡಗಳಿಂದ ಮೇಲ್ಕಂಡ ಆರೋಪಿತ ಸರ್ಕಾರಿ ನೌಕರರ ವಿರುದ್ದ ದಾಳಿ ಮುಂದುವರೆದಿದ್ದು, ಸದರಿ ಸರ್ಕಾರಿ ನೌಕರರು ಹೊಂದಿರುವ ಆಸ್ತಿ-ಪಾಸ್ತಿಗಳ ಮೂಲದ ಬಗ್ಗೆ ತನಿಖೆ ಮುಂದುವರೆದಿದೆ.

ಫ್ರೆಶ್ ನ್ಯೂಸ್

Latest Posts

Featured Videos