ಸಬ್ ರಿಜಿಸ್ಟ್ರಾರ್ ಕಚೇರಿ ಮೇಲೆ ಎಸಿಬಿ ದಾಳಿ 55 ಸಾವಿರ ರೂ. ವಶ!

ಸಬ್ ರಿಜಿಸ್ಟ್ರಾರ್ ಕಚೇರಿ ಮೇಲೆ ಎಸಿಬಿ ದಾಳಿ 55 ಸಾವಿರ ರೂ. ವಶ!

ಹುಬ್ಬಳ್ಳಿ, ಏ. 9, ನ್ಯೂಸ್ ಎಕ್ಸ್ ಪ್ರೆಸ್: ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಸರ್ಕಾರಿ ಫೀಸ್ ಗಿಂತ ಹೆಚ್ಚು ಹಣ ಪಡೆಯುತ್ತಾರೆಂಬ ದೂರು ಕೇಳಿಬಂದ ಹಿನ್ನಲೆ, ಎಸಿಬಿ ಅಧಿಕಾರಿಗಳು ದಾಳಿ ನಡೆಸಿ 55 ಸಾವಿರ ದಾಖಲೆಯಿಲ್ಲದ ಹಣ ಜಪ್ತಿ ಮಾಡಿದ್ದಾರೆ. ಹುಬ್ಬಳ್ಳಿ: ಸರ್ಕಾರಿ ಫೀಸ್​ಗಿಂತ ಹೆಚ್ಚು ಹಣ ಪಡೆಯುತ್ತಾರೆಂಬ ದೂರಿನ ಮೇರೆಗೆ ಸಬ್ ರಿಜಿಸ್ಟರ್​ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳ ದಾಳಿ ನಡೆಸಿದ್ದಾರೆ. ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಸರ್ಕಾರಿ ಫೀಸ್ ಗಿಂತ ಹೆಚ್ಚು ಹಣ ಪಡೆಯುತ್ತಾರೆಂಬ ದೂರು ಕೇಳಿಬಂದ ಹಿನ್ನಲೆ ಮೇರೆಗೆ ಎಸಿಬಿ ಅಧಿಕಾರಿಗಳು ನಿನ್ನೆ ದಾಳಿ ನಡೆಸಿದ್ದಾರೆ. ಕಚೇರಿ ಸಿಬ್ಬಂದಿ ಹಾಗೂ ಬಾಂಡ್ ರೈಟರ್ ಬಳಿ ಇರುವ ಹಣವನ್ನು ಪರಿಶೀಲನೆ ಮಾಡಿದಾಗ, ದಾಖಲೆ ಮೀರಿ ಹಣ ಪತ್ತೆಯಾಗಿರುವುದು ಬೆಳಕಿಗೆ ಬಂದಿದ್ದು, ದಾಖಲೆ‌ ಮೀರಿದ 55 ಸಾವಿರ ಹಣವನ್ನು ಜಪ್ತಿ ಮಾಡಿದ್ದಾರೆ.  ಎಸಿಬಿ ಡಿವೈಎಸ್ ಪಿ ವಿಜಯಕುಮಾರ್ ಬಿಸನಳ್ಳಿ ನೈತೃತ್ವದಲ್ಲಿ ದಾಳಿ ನಡೆಸಿದ್ದು, ಅಧಿಕಾರಿಗಳನ್ನ ವಿಚಾರಣೆ ನಡೆಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos