ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಮಾಡುತ್ತಿಲ್ಲ

ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಮಾಡುತ್ತಿಲ್ಲ

ಕೆ.ಆರ್ ಪುರ, ಜು. 5: ಬಿಜೆಪಿ ಜನಪ್ರತಿನಿಧಿಳಿಗಿರುವ  ವಾಡ್೯ಗಳಿಗೆ  ಅನುದಾನದಲ್ಲಿ ತಾರತಮ್ಯ ಮಾಡುವ ಮೂಲಕ ಅಭಿವೃದ್ಧಿಗೆ ಸರ್ಕಾರ ಅಡ್ಡಗಾಲಗಿದೆ ಎಂದು ವರ್ತೂರು ವಾಡ್೯ ಪಾಲಿಕೆ ಸದಸ್ಯೆ ಪುಷ್ಪ ಮಂಜುನಾಥ್ ಅವರು ತಿಳಿಸಿದ್ದಾರೆ.

ಇಂದು ಮಹದೇವಪುರ ಕ್ಷೇತ್ರದ ವರ್ತೂರು ವಾರ್ಡ್ ಕಚೇರಿಯಲ್ಲಿ ಏರ್ಪಡಿಸಿದ್ದ ಪ್ರತಿಕಾಗೊಷ್ಠಿಯಲ್ಲಿ ಮಾತಾನಾಡಿದ ಅವರು ನಾವು ಯಾವುದೇ ರೀತಿಯ ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಮಾಡುತ್ತಿಲ್ಲ ಅನುದಾನದ ಕೊರತೆಯಿಂದ ಅಭಿವೃದ್ಧಿ ಕುಂಠಿತ ವಾಗಿದೆ ಎಂದು ಹೇಳಿದರು.

ವಾರ್ಡ್ ನಲ್ಲಿ ಮೂಲಸೌಕರ್ಯ ಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದ್ದು ಅಭಿವೃದ್ಧಿ ಆದ್ಯತೆ ನಿಡುತ್ತಿದ್ದೆವೆ ಎಂದು ನುಡಿದರು.

ವಾಡ್೯ನ ಕೆಲವೆಡೆ ನೀರಿನ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆ ಗಳಿವೆ ಅದನ್ನು ಹಂತ ಹಂತವಾಗಿ ಪರಿಹರಿಸಲಾಗುವುದು ಎಂದು ನುಡಿದರು.

ವಾರ್ಷಿಕ ವಾಗಿ ಮೂರು ಕೋಟಿ ಅನುದಾನ ನೀಡಿದರೆ ಅಭಿವೃದ್ಧಿ ಅಸಾದ್ಯವಾಗಿದೆ, ನಾನು ಮೇಯರ್ ಅವರಿಗೂ ಸಹ ಮನವಿ ಮಾಡಿದ್ದರು ಅಭಿವೃದ್ಧಿ ವಿಚಾರದಲ್ಲಿ ಅನುದಾನ ಬರದೆ ವಾಡ್೯ ನಲ್ಲಿ ಕಷ್ಟ ಕರ ಪರಿಸ್ಥಿತಿ ಯಿದೆ ಎಂದು ದೂರಿದರು.

ಈ ಪರಿಸ್ಥಿತಿ ಯನ್ನು ದುರ್ಬಳಕೆ ಮಾಡಿಕೊಂಡರಿವ ಕೆಲ ಕಾಂಗ್ರೆಸ್ ಮುಖಂಡರು ನೀರು ಸೇರಿದಂತೆ ಮೂಲಸೌಕರ್ಯ ನೂನ್ಯತೆಗೆ ಪ್ರತಿಭಟನೆ ನಡೆಸುವ ಬದಲು ಏಲ್ಲ ಪಕ್ಷದವರು ಅಭಿವೃದ್ಧಿ ಗೆ ಕೈಜೋಡಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕ್ಷೇತ್ರದ ಬಿಜೆಪಿ ಅಧ್ಯಕ್ಷ ರಾಜಾರೆಡ್ಡಿ, ಮುಖಂಡರಾದ ವರ್ತೂರು ಬಿ.ಎಸ್.ಶ್ರೀಧರ್, ಬಳಗೆರೆ ಮಂಜುನಾಥ್, ಮನೋಹರ್, ಸುನೀಲ್ ಇದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos