ರಂಗಾಯಣ ರಘುಗೆ ಲಭಿಸಿತು ಹೊಸ ಬಿರುದು!

ರಂಗಾಯಣ ರಘುಗೆ ಲಭಿಸಿತು ಹೊಸ ಬಿರುದು!

ಬೆಂಗಳೂರು: ಸ್ಯಾಂಡಲ್‌ವುಡ್‌ನ ಹಿರಿಯ ನಟ ರಂಗಾಯಣ ರಘು, ತಮ್ಮ ನಟನೆಯ ಮೂಲಕವೇ ಗಮನ ಸೆಳೆದಿದ್ದಾರೆ. ಸಿಕ್ಕ ಪಾತ್ರಗಳ ಆಳಕ್ಕೆ ಇಳಿದು ಜೀವಿಸುವ, ನಿರ್ದೇಶಕನ ಆಶಯಕ್ಕೂ ಮಿಗಿಲಾದುದ್ದನ್ನೇ ನೀಡುವ ನಟ ಇವರು.

ನಮ್ಮ ಚಿತ್ರರಂಗದಲ್ಲಿ  ಅದ್ಭುತ ಕಲಾವಿದರಲ್ಲಿ ರಂಗಾಯಣ ರಘು ಒಬ್ಬರು. ಹಾಸ್ಯನಟ, ಪೋಷಕ ಪಾತ್ರ, ವಿಲನ್, ಗಂಭೀರ ಪಾತ್ರ ಯಾವುದನ್ನೇ ಕೊಟ್ಟರು ಅವರೇ ಬೆಸ್ಟ್ ಎನ್ನುವಂತೆ ನಟಿಸಬಲ್ಲ ಛಾತಿಯುಳ್ಳ ನಟರವರು. ಈ ವರೆಗೂ ಕನ್ನಡದಲ್ಲಿ 350ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ರಂಗಾಯಣ ರಘು ಅವರಿಗೆ ಇದೀಗ ಹೊಸ ಬಿರುದು ಸಿಕ್ಕಿದೆ.

ರಂಗಾಯಣ ರಘು ನಟಿಸಿರುವ ‘ಶಾಖಾಹಾರಿ’ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಇದೀಗ ಬಿಡುಗಡೆ ಆಗಿರುವ ಸಿನಿಮಾದ ಟ್ರೈಲರ್ ನೋಡಿಯೇ ಹಲವಷ್ಟು ಮಂದಿ ರಂಗಾಯಣ ರಘು ಅವರ ನಟನೆಗೆ ಮಾರು ಹೋಗಿದ್ದಾರೆ. ವರ್ಷಗಳಿಂದಲೂ ಕನ್ನಡ ಸಿನಿಮಾ ಪ್ರೇಕ್ಷಕರನ್ನು ರಂಜಿಸುತ್ತಲೇ ಬಂದರುವ ರಂಗಾಯಣ ರಘು ಅವರೀಗ ‘ಅಭಿನಯಾಸುರ’ಎಂಬ ಬಿರುದು ನೀಡಿ ಗೌರವಿಸಲಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos