ದೆಹಲಿಯಲ್ಲಿ ಕಾಂಗ್ರೆಸ್-ಆಪ್ ನಡುವೆ ಮೈತ್ರಿ ಇಲ್ಲ: ಶೀಲಾ ದೀಕ್ಷಿತ್

ದೆಹಲಿಯಲ್ಲಿ ಕಾಂಗ್ರೆಸ್-ಆಪ್ ನಡುವೆ ಮೈತ್ರಿ ಇಲ್ಲ: ಶೀಲಾ ದೀಕ್ಷಿತ್

ನವದೆಹಲಿ, ಫೆ.5, ನ್ಯೂಸ್ ಎಕ್ಸ್ ಪ್ರೆಸ್: 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಆಪ್ ನಡುವೆ ಮೈತ್ರಿ ಇಲ್ಲ ಎಂದು ದೆಹಲಿ ಕಾಂಗ್ರೆಸ್ ಅಧ್ಯಕ್ಷೆ ಶೀಲಾ ದೀಕ್ಷಿತ್ ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಶೀಲಾ ದೀಕ್ಷಿತ್ ಅವರು ಮಂಗಳವಾರ ಭೇಟಿಯಾಗಿ ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ತಯಾರಿಯ ಬಗ್ಗೆ ಚರ್ಚೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶೀಲಾ ದೀಕ್ಷಿತ್ ಅವರು ಆಪ್ ನೊಂದಿಗೆ ಕಾಂಗ್ರೆಸ್ ಪಕ್ಷ ಮೈತ್ರಿ ಮಾಡಿಕೊಳ್ಳುವುದಿಲ್ಲ. ಈ ಬಗ್ಗೆ ಕಾಂಗ್ರೆಸ್ ಸ್ಪಷ್ಟ ನಿರ್ಧಾರ ಕೈಗೊಂಡಿದೆ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos