ಆಧಾರ್ ಕಾರ್ಡ್ ಗಳಲ್ಲಿ ಬರೀ ಇಂಗ್ಲಿಷ್ ಇದ್ದರೆ ಅಂತಹ ತಿರಸ್ಕೃತ

ಆಧಾರ್ ಕಾರ್ಡ್ ಗಳಲ್ಲಿ ಬರೀ ಇಂಗ್ಲಿಷ್ ಇದ್ದರೆ ಅಂತಹ ತಿರಸ್ಕೃತ

ಮಂಗಳೂರು, ಜೂನ್. 25: ಆಧಾರ್ ಕಾರ್ಡ್ನಲ್ಲಿ ಹೆಸರು ಇಂಗ್ಲಿಷ್ ಜತೆಗೆ ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆಯಲ್ಲಿ ಮುದ್ರಿತವಾಗಬೇಕು. ಅದರಂತೆ ರಾಜ್ಯದಲ್ಲಿ ಕನ್ನಡದಲ್ಲಿ ಹೆಸರು ಮುದ್ರಿತವಾಗುತ್ತದೆ. ಆದರೆ ತಾಂತ್ರಿಕ ದೋಷದಿಂದ ಏನಾದರೂ ಪ್ರಾದೇಶಿಕ ಭಾಷೆ ಬಿಟ್ಟುಹೋಯಿತೆಂದರೆ ತಿದ್ದುಪಡಿಯಾಗಲೇಬೇಕು.
ಪ್ರಾದೇಶಿಕ ಭಾಷೆ ಅಗತ್ಯ ಪಡಿತರ ಚೀಟಿ(ರೇಷನ್ ಕಾರ್ಡ್)ಗೆ ಹೆಸರು ಸೇರಿಸುವಾಗ ಪ್ರಾದೇಶಿಕ ಭಾಷೆ ಗಳಲ್ಲಿ ಹೆಸರಿರಲೇಬೇಕು. ರಾಜ್ಯದಲ್ಲಿ ಪಡಿತರ ಚೀಟಿಗೆ ಆನ್ ಲೈನ್ ಮೂಲಕ ಇಂಗ್ಲಿಷ್ ನಲ್ಲಿ ಹೆಸರು ಟೈಪ್ ಮಾಡುವಾಗ ಕನ್ನಡವೂ ಬರುತ್ತದೆ. ಒಂದು ವೇಳೆ ಇಂಗ್ಲಿಷ್ ಮಾತ್ರ ಇದ್ದರೆ ಪಡಿತರ ಚೀಟಿಯ ಆನ್ ಲೈನ್ ವ್ಯವಸ್ಥೆ ಸ್ವೀಕರಿಸುವುದಿಲ್ಲ. ಪ್ರಮುಖವಾಗಿ ಪಡಿತರ ಚೀಟಿಯಲ್ಲಿ ಮಕ್ಕಳ ಹೆಸರು ಸೇರಿಸಲು ತೊಂದರೆಯಾಗುತ್ತಿದೆ. ಇಂಗ್ಲೀಷ್ ನಲ್ಲಷ್ಟೇ ಇದ್ದರೆ ಪಡಿತರ ಚೀಟಿಯ ಆನ್ ಲೈನ್ ವ್ಯವಸ್ಥೆ ಅಂತಹ ಆಧಾರ್ ಕಾರ್ಡನ್ನು ಸ್ವೀಕರಿಸುವುದಿಲ್ಲ. ದ.ಕ. ಜಿಲ್ಲೆಯಲ್ಲಿ ಈ ಹಿಂದೆ 5 ವರ್ಷಕ್ಕಿಂತ ಕೆಳಗಿನ 200ಕ್ಕೂ ಹೆಚ್ಚು ಮಕ್ಕಳಿಗೆ ಟ್ಯಾಬ್ ಮೂಲಕ ಕನ್ನಡವಿಲ್ಲದ ಆಧಾರ್ ಕಾರ್ಡ್ ನೀಡಲಾಗಿತ್ತು.
ಆದರೆ 5 ವರ್ಷಗಳ ಬಳಿಕ ಬಯೋ ಮೆಟ್ರಿಕ್ ಮೂಲಕ ಕಾರ್ಡ್ ಬದಲಿಸುವಾಗ ಕನ್ನಡ ಸೇರ್ಪಡೆಯಾಗುತ್ತದೆ. ಆದರೂ ಸಂಬಂಧಿತರ ಗಮನಕ್ಕೆ ತರಲಾಗು ವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಧಾರ್ ಕಾರ್ಡ್ನಲ್ಲಿ ಕೇವಲ ಇಂಗ್ಲಿಷ್ ಇದ್ದರೆ ರೇಷನ್ ಕಾರ್ಡ್ಗೆ ಲಿಂಕ್ ಆಗುವುದಿಲ್ಲ. ಕನ್ನಡ ಕಡ್ಡಾಯ. ಇಂಗ್ಲಿಷ್ ಮಾತ್ರ ಇದ್ದರೆ ಅಂತಹ ಆಧಾರ್ ಕಾರ್ಡ್ಗಳನ್ನು ತಿದ್ದುಪಡಿ ಮಾಡಬೇಕು. ಆಧಾರ್ ಕಾರ್ಡ್ ನಲ್ಲಿ ಇಂಗ್ಲಿಷ್ ಜತೆಗೆ ಕನ್ನಡದಲ್ಲೂ ನಿಮ್ಮ ಹೆಸರಿಲ್ಲದಿದ್ದರೆ ಕೂಡಲೇ ತಿದ್ದುಪಡಿ ಮಾಡಿಸುವುದು ಸೂಕ್ತ.

ಫ್ರೆಶ್ ನ್ಯೂಸ್

Latest Posts

Featured Videos