ರಾನು ರಂತೆ ಹಾಡ್ತಾಳೆ ಮಹಿಳೆ

ರಾನು ರಂತೆ ಹಾಡ್ತಾಳೆ ಮಹಿಳೆ

ನ.25 : ರಾನು ಮೊಂಡಲ್ ಬಗ್ಗೆ ಎಲ್ಲರಿಗೂ ಗೊತ್ತು. ರೈಲ್ವೆ ನಿಲ್ದಾಣದಲ್ಲಿ ಭಿಕ್ಷೆ ಬೇಡ್ತಾ ಹಾಡು ಹಾಡಿ ರಾತ್ರೋರಾತ್ರಿ ಪ್ರಸಿದ್ಧಿಗೆ ಬಂದ ರಾನು ಮೊಂಡಲ್ ಈಗ ಸೆಲೆಬ್ರಿಟಿ. ಈಗ ರಾನು ಮೊಂಡಲ್ ರಂತೆ ಕಾಣುವ ಇನ್ನೊಂದು ಮಹಿಳೆ ವಿಡಿಯೋ ವೈರಲ್ ಆಗಿದೆ.

ಈ ವಿಡಿಯೋದಲ್ಲಿ ಮಹಿಳೆ, ರಾನು ಹಾಡು `ತೇರಿ ಮೇರಿ ಕಹಾನಿ’ ಹಾಡುವ ಯತ್ನ ನಡೆಸಿದ್ದಾಳೆ. ಇನ್ಸ್ಟ್ರಾಗ್ರಾಮ್ ನಲ್ಲಿ ಹಂಚಿಕೊಂಡಿರುವ ವಿಡಿಯೋ ರಾತ್ರೋರಾತ್ರಿ ವೈರಲ್ ಆಗಿದೆ.

ದೀಪಂಕರ್ ಬೈಶ್ಯ ಹೆಸರಿನ ವ್ಯಕ್ತಿಯೊಬ್ಬ ಇನ್ಸ್ಟ್ರಾಗ್ರಾಮ್ ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾನೆ. ಗುವಾಹಟಿಯಲ್ಲಿ ರಾನು ಮೊಂಡಲ್ ಎಂದು ಇನ್ಸ್ಟ್ರಾಗ್ರಾಮ್ ನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ.

ವಿಡಿಯೋ ಮಾಡ್ತಿರುವ ವ್ಯಕ್ತಿ, ರಾನು ಹಾಡು ಹೇಳುವಂತೆ ಒತ್ತಾಯಿಸುತ್ತಾನೆ. ಇದಕ್ಕೆ ನಗುವ ಮಹಿಳೆ ನಂತ್ರ ತೇರಿ ಮೇರಿ ಕಹಾನಿ ಹಾಡು ಹಾಡಲು ಯತ್ನಿಸುತ್ತಾಳೆ.

 

ಫ್ರೆಶ್ ನ್ಯೂಸ್

Latest Posts

Featured Videos