ಚರಂಡಿಯಿಲ್ಲದ ಗ್ರಾಮ ಸಾಂಕ್ರಾಮಿಕ ಭೀತಿ

ಚರಂಡಿಯಿಲ್ಲದ ಗ್ರಾಮ ಸಾಂಕ್ರಾಮಿಕ ಭೀತಿ

ಕುಣಿಗಲ್: ಗ್ರಾಮದಲ್ಲಿ ಚರಂಡಿಯ ವ್ಯವಸ್ಥೆಯಿಲ್ಲದೆ ಮನೆಗಳಿಂದ ಬಿಡುವ ತ್ಯಾಜ್ಯದ ನೀರು ನಿಂತಲ್ಲೇ ನಿಂತು ಕೊಳೆತು ಸೊಳ್ಳೆಗಳ ಹಾವಳಿ ಜಾಸ್ತಿಯಾಗಿ ಸಾಂಕ್ರಾಮಿಕ ರೋಗಗಳು ಹರಡುವಿಕೆಯ ಭೀತಿ ಉಂಟಾಗಿದೆ.
ನೀರು ಸರಾಗವಾಗಿ ಹರಿಯಲು ಚರಂಡಿ ನಿರ್ಮಿಸುವಂತೆ ಗ್ರಾಪಂ ಅಧಿಕಾರಿಗಳಿಗೆ ಎಷ್ಟು ಬಾರಿ ಹೇಳಿದರೂ ಪ್ರಯೋಜನವಾಗಿಲ್ಲ ಚರಂಡಿ ನಿರ್ಮಿಸದೆ ಹೋದರೆ ಗ್ರಾಪಂ ಮುಂದೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳಿಗೆ ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.
ತಾಲ್ಲೂಕಿನ ಯಡಿಯೂರು ಹೋಬಳಿ ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಠನಹಳ್ಳಿ ಗ್ರಾಮದ ಸಾರ್ವಜನಿಕರು ಪತ್ರಿಕೆಯೊಂದಿಗೆ ಮಾತನಾಡಿ ಗ್ರಾಮ ಪಂಚಾಯಿತಿಯವರು ಚರಂಡಿ ನಿರ್ಮಿಸದೇ ಮನೆಗಳಿಂದ ಬಿಡುವ ತ್ಯಾಜ್ಯ ನೀರು ನಿಂತಲ್ಲೇ ನಿಂತು ಕೊಳೆತು ಸೊಳ್ಳೆಗಳ ಕಾಟ ಜಾಸ್ತಿಯಾಗುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಮುನ್ಸೂಚನೆ ತೋರುತ್ತಿದೆ ಹಾಗೂ ಕಿರು ನೀರು ಸರಬರಾಜು ಮಾಡುವ ಟ್ಯಾಂಕ್‌ಗಳ ಬಳಿ ಗಿಡ ಗಂಟೆಗಳು ಬೆಳೆದು ನಿಂತು ಸ್ವಚ್ಛತೆ ಮರೀಚಿಕೆಯಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos