ವಿದ್ಯಾರ್ಜನೆಯೊಂದಿಗೆ ಸಮಾಜ ಶುಚಿಗೂ ಬದ್ದವೆಂದ ವಿದ್ಯಾರ್ಥಿ ಕೂಟ

ವಿದ್ಯಾರ್ಜನೆಯೊಂದಿಗೆ ಸಮಾಜ ಶುಚಿಗೂ ಬದ್ದವೆಂದ ವಿದ್ಯಾರ್ಥಿ ಕೂಟ

ಬೆಂಗಳೂರು, ಫೆ. 05: ಕಾಲೇಜು ವಿದ್ಯಾರ್ಥಿಳೆಂದರೆ ಮೊಬೈಲ್ ಗೀಳು  ಕೇವಲ ಓದು ಶೋಕಿ ಎನ್ನು ಇಂದಿನ ದಿನ ಮಾನಗಳಲ್ಲಿ ಇದಕ್ಕೆ ಅಪವಾದವೆಂಬಂತೆ ಸಮಯ ವ್ಯರ್ಥ ಮಾಡದೆ ಸಾಮಾಜಿಕ ಕಳಕಳಿಯೊಂದಿಗೆ  ಬೀದಿ ಬದಿ ಹಾಗೂ ಕಳೆ ಸ್ವಚ್ಚಗೊಳಿಸುವ ಮೂಲಕ ಸ್ವಚ್ಚತೆಯಲ್ಲಿ ತೊಡಗಿ ರುವುದು ಅಪರೂಪದ ಸಂಗತಿ.

ವಿದ್ಯಾರ್ಥಿ ಸೇವೆ

ನಮ್ಮ ಕೃಪಾನಿಧಿ ಕಾಲೇಜಿನಲ್ಲಿ ಎನ್ ಎಸ್ ಎಸ್ ವಿದ್ಯಾರ್ಥಿಗಳು ಇರುವುದು ಸಂತೋಷದ ವಿಷಯ ಸಮಾನ ಮನಸ್ಕರ ಗೆಳೆಯ ಗೆಳತಿಯರ ಗುಂಪೊಂದನ್ನು ಕಟ್ಟಿಕೊಂಡು ತಮ್ಮ ಕಾಲೇಜಿನ ಸುತ್ತಮುತ್ತಲು ಬೆಳೆದಿರುವ ಗಿಡ ಗಂಟೆ ಕಳೆಯನ್ನು ಸ್ವಚ್ಛಗೊಳಿಸುವ ಮೂಲಕ ಇತರೆ ಕಾಲೇಜು ವಿದ್ಯಾರ್ಥಿಗಳಿಗೆ ಮಾದರಿಯೆನಿಸಿಕೊಂಡಿದ್ದರೆ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನಿಸ್ವಾರ್ಥ ಸೇವೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳು ಬೀದಿಯಲ್ಲಿನ ಕಸ ಸ್ವಚ್ಚಗೊಳಿಸುವ ನಟ್ಟಿನಲ್ಲಿ ಕಾಯಕ ಜೀವನಕ್ಕೆ ಮೊರೆ ಹೋಗಿರುವುದು ಕೃಪಾನಿಧಿ ಕಾಲೇಜಿನ ಹೆಮ್ಮೆಯ ವಿಷಯ ಎಂದು ಹೇಳಿಕೊಳ್ಳಲು ಹರ್ಷವೆನಿಸುತ್ತದೆ.

ಮೊಬೈಲ್ ನಿಂದ ದೂರ

ನಮ್ಮ ಕಾಲೇಜಿನ ರಾಷ್ಟ್ರೀಯ ಸ್ವಯಂ ಸೇವಕ ತಂಡ ಇಂದು ಮತ್ತು ನಾಳೆ ಹಾಗೂ ರಜೆಯ ದಿನಗಳಂದು ಹಲವು ರೀತಿಯ ಸಾಮಾಜಿಕ ಶೈಕ್ಷಣಿಕ ಸಮಾಜಮುಖಿ ಕೆಲಸಗಳಲ್ಲಿ ತೊಡಗಿ ಸ್ಲಂ ಸೇರಿದಂತೆ ಇತರ ಹಿಂದುಳಿದ ಪ್ರದೇಶಗಳಿಗೆ ತಂಡಗಳೋಪಾದಿಯಲ್ಲಿ ತೆರಳಿ ಸಾಮಜಿಕ ಕಳಕಳಿಯ ವಿಚಾರ ವಿನಿಮಯದೊಂದಿಗೆ ಅಲ್ಲಿ ಪರಿಸರ ಅವಲೋಕನ ಜತೆಯಲ್ಲಿ ಆರೋಗ್ಯಯುತ ಜೀವನಕ್ಕೆ ಸುತ್ತಮುತ್ತಲಿನ ಪರಿಸರ ಸ್ವಚ್ಚತೆ ಹಾಗೂ ಶಿಕ್ಷಣ ಕುರಿತಾಗಿ ಅರಿವು ಮೂಡಿಸುವ ನಿಟ್ಟಿನಲ್ಲಿ ತೊಡಗಿರುವುದು ನಮ್ಮ ಕಾಲೇಜು ವಿದ್ಯಾರ್ಥಿಗಳ ಸ್ವಯಂ ಸೇವೆ ಕೃಪಾ ನಿಧಿ ಕಾಲೇಜು ಆಡಳಿತ ಮಂಡಳಿಗೆ ಹೆಮ್ಮೆ ಗರಿಮೆ ತಂದು ಕೊಟ್ಟಿದೆ.

ತ್ಯಾಜ್ಯದ ಅರಿವು ಮೂಡಿಸುವ ಎನ್ ಎಸ್ ಎಸ್ ಘಟಕನಮ್ಮ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರೀಯ ಸ್ವಯಂ ಸೇವೆಕರ ಘಟಕದ ವಿದ್ಯಾರ್ಥಿಗಳು ಓದುವ ಕಾಯಕದ ಜತೆಯಲ್ಲಿ ಸಮಾಜ ಮುಖಿಯಾಗಿ ಬದುಕುವುದು ಹೇಗೆಂಬುದನ್ನು ಅತ್ಯಂತ ನಾಜೂಕು ಹಾಗೂ ಸಂಯಮದಿಂದ ಅರಿವು ಮೂಡಿಸುವುದಲ್ಲದೆ ಸಮಾಜದಲ್ಕಿ ತಾವೂ ಬದುಕಿ ಮತ್ತೊಬ್ಬರು ಬದುಕುವುದು ಹೇಗೆಂಬುದನ್ನು ತೋರಿಸಿಕೊಡುವ ನೈಜತೆಯ ಮೆಚ್ಚುವಂತಹದ್ದು.ಓದನ್ನು ಅರ್ಧಕ್ಕೆ ನಿಲ್ಲಿಸಿ ಅತ್ತ ಬದುಕು ಮಾಡಲಾಗದೆ ಉದ್ಯೋಗ ಮಾಡಲಾಗದ ಯುವಕರಿಗೆ ಇಂದಿನ ದುಡಿಮೆಯ ಅರಿವು ಮೂಡಿಸುವಲ್ಲಿ ಕೃಪಾನಿಧಿ ಕಾಲೇಜಿನ ಎನ್ ಎಸ್ ಎಸ್ ಘಟಕ ಶಿಬಿರಾರ್ಥಿಗಳು ಯಶಸ್ವಿಯಾಗಿದ್ದಾರೆ. ನಿರೂದ್ಯೋಗಿಗಳಿಗೆ ಹಳ್ಳಗಳಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳುವ ಕುರಿತಾಗಿ ಅರಿವು ಮೂಡಿಸುವಲ್ಲೂ ಕಾಲೇಜಿನ ವಿದ್ಯಾರ್ಥಿಗಳು ಯಶಸ್ವಯಾಗಿದ್ದಾರೆ. ಕೃಷಿಯಲ್ಲಿ‌ಆಧುನಿಕ ಯಂತ್ರೋಪಕರಣಗಳ ಬಳಕೆ, ಸಾವಯವ ಕೃಷಿ ಹಗೂ ರೈತರು ಬೆಳೆದ ಬೆಳೆಗೆ ತಾವೇ ಮಾರುಕಟ್ಟೆ ಹೇಗೆ ಕಲ್ಪಿಸಿಕೊಳ್ಳ ಬೇಕು ಎಂಬುದರ ಕುರಿತಾಗಿ ಅರಿವು ಮೂಡಿಸುವಲ್ಲಿ ಕೃಪಾನಿಧಿ ಕಾಲೇಜು ಎಎಸ್ ಎಸ್ ಘಟಕದ ಪಾತ್ರ ಮೆಚ್ಚುವಂತಹದ್ದು.

ಸೇವೆಯಲ್ಲಿ ಆತ್ಮ ತೃಪ್ತಿ

ಕೃಪಾನಿಧಿ ಕಾಲೇಜಿನ ಎನ್ ಎಸ್ ಎಸ್ ಘಟಕದ ವಿದ್ಯಾರ್ಥಿಗಳು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕಸ ಹಾಗೂ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದಂತೆ ಅರಿವು ನೀಡುವುದರೊಂದಿಗೆ ತ್ಯಾಜ್ಯ ಎಸೆಯುವುದರಿಂದಾಗುವ ಪರಿಸರದ ಮೇಲಿನ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವ ಮೂಲಕ ಸಮಾಜ ಮುಖಿ ಹಾಗೂ ಸಮಾಜದ ಏಳಿಗೆಯ ದೃಷ್ಟಿಕೋನದಲ್ಲಿ ತಮ್ಮ ವಿದ್ಯಾರ್ಥಿ ಜೀವನದಲ್ಲೇ ಅಳವಡಿಸಿಕೊಳ್ಳುವ ಮೂಲಕ ಮುಂದಿನ ಪೀಳಿಗೆಗೆ ಮಾರ್ಗದರ್ಶಕ ಶಿಸ್ತಿನ ಸಿಪಾಯಿ  ವಿದ್ಯಾರ್ಥಿಗಳೆನಿಸಿಕೊಂಡಿರುವುದು ಕೃಪಾನಿಧಿ ಕಾಲೇಜಿನ ಹಿರಿಮೆ ಕೋಡು ಮೂಡಿಸಿದಂತಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos