ಪೊಲೀಸರಿಗೆ ತಲೆ ನೋವಾದ  ವಿಚಿತ್ರ ಗ್ಯಾಂಗ್

ಪೊಲೀಸರಿಗೆ ತಲೆ ನೋವಾದ  ವಿಚಿತ್ರ ಗ್ಯಾಂಗ್

ಬೆಂಗಳೂರು, ಡಿ. 16: ಬೆಂಗಳೂರು ಪೊಲೀಸರು ಹೊಸ ವರ್ಷಕ್ಕೆ ಆಗುವ ಅನಾಹುತಗಳನ್ನು ತಪ್ಪಿಸುವುದಕ್ಕೆ ಮುಂಜಾಗ್ರತಾ ಕ್ರಮಕೈಗೊಳ್ಳುವ ತಯಾರಿಯಲ್ಲಿದ್ದಾರೆ. ಹೊಸ ವರ್ಷ ಸಂಭ್ರಮಾಚರಣೆಯ ಹಾಟ್ ಸ್ಪಾಟ್ ಆದ ಬ್ರಿಗೇಡ್ ರೋಡ್, ಎಂಜಿ ರೋಡ್, ಚರ್ಚ್ ಸ್ಟ್ರೀಟ್ ಸುತ್ತಮುತ್ತ ಹದ್ದಿನ ಕಣ್ಣಿಡಲು ಪೊಲೀಸರು ಭರ್ಜರಿ ತಯಾರಿ ಮಾಡಲು ಮುಂದಾಗಿದ್ದಾರೆ. ಈ ನಡುವೆ ಹೊಸ ವರ್ಷ ಸಂಭ್ರಮಾಚರಣೆಯ ಹಾಟ್ ಸ್ಪಾಟ್ ಏರಿಯಾದ ಸುತ್ತ ಹುಟ್ಟಿಕೊಂಡಿರುವ ವಿಚಿತ್ರ ಗ್ಯಾಂಗ್ ಬೆಂಗಳೂರು ಪೊಲೀಸರ ನಿದ್ದೆಗೇಡಿಸಿದೆ.

ಯುಬಿ ಸಿಟಿ, ಎಂಜಿ ರೋಡ್, ಪಬ್ ಬಾರ್‍ಗಳಲ್ಲಿ ಪುಂಡ ಕಂಠಪೂರ್ತಿ ಕುಡಿದು ಹಾವಳಿ ಇಡುತ್ತಿದ್ದಾರೆ. ಕುಡಿದ ಅಮಲಿನಲ್ಲಿ ಕಿರಾತಕರ ಗ್ಯಾಂಗ್ ಲೇಟ್ ನೈಟ್ ಮಾಲ್‍ಗಳ ಬಾಗಿಲ ಮೇಲೆ, ಖಾಸಗಿ ಗೋಡೆಗಳ ಮೇಲೆ ಚಿತ್ರ ವಿಚಿತ್ರವಾಗಿ ಪೈಂಟ್ ಬಳಿಯುವುದು, ಪೊಲೀಸರ ವಿರುದ್ಧ ಕೆಟ್ಟ ಪದಗಳನ್ನು ಬರೆಯುತ್ತಿದ್ದಾರೆ. ಸಿಸಿಟಿವಿ ಆಧಾರದ ಮೇಲೆ ಆರೋಪಿಗಳನ್ನ ಬಂಧಿಸಿರುವ ಪೊಲೀಸರು ಮತ್ತಷ್ಟು ವಿಕೃತ ಮನಸ್ಸುಗಳನ್ನು ಎಡೆಮುರಿ ಕಟ್ಟಲು ಮುಂದಾಗಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos