ಲೋಕಾರ್ಪಣೆಗೆ ಸಿದ್ದವಾಯ್ತು ಸೈನಿಕ ಸ್ಮಾರಕ ವೀರಗಲ್ಲು

ಲೋಕಾರ್ಪಣೆಗೆ ಸಿದ್ದವಾಯ್ತು ಸೈನಿಕ ಸ್ಮಾರಕ ವೀರಗಲ್ಲು

ಬೆಂಗಳೂರು, ನ. 05: ಯಾವುದೇ ಸರ್ಕಾರದ ಯೋಜನೆಗಳ ಕಾಮಗಾರಿಗಳು ಸಾರ್ವಜನಿಕರಂದು ಕೊಂಡಂತೆ ಅಷ್ಟು ಸುಲಭವಾಗಿ ನಿಗದಿತ ಸಮಯಕ್ಕೆ ನಡೆಯುವುದು ಕಷ್ಟ ಸಾಧ್ಯ ಅಂತೆಯೇ ನಗರದ ಸೈನಿಕ ಸ್ಮಾರಕದಲ್ಲಿನ ವೀರಗಲ್ಲು ಸ್ಥಾಪನೆಯ ಕಾಮಗಾರಿ ಕೆಲಸ  ಕುಂಟುತ್ತಾ ಸಾಗಿ ಕೊನೆಗೂ ಅಂತಿಮವಾಗಿ ಉದ್ಘಾಟನೆ ಸಿದ್ದಗೊಂಡಿದೆ.

2009 ರಲ್ಲಿ ನಗರದ ರಾಷ್ಟ್ರೀಯ ಸೈನಿಕ ಸ್ಮಾರಕದಲ್ಲಿ ವೀರಗಲ್ಲು ಸ್ಥಾಪಿಸುವ ಯೋಜನೆಗೆ ಶಿಲಾನ್ಯಾಸ ಮಾಡಿ ಇಲ್ಲಿಗೆ ಬರೋಬ್ಬರಿ 5 ವರ್ಷಗಳೇ ಕಳೆದಿವೆ. ನಗರಾಭಿವೃದ್ದಿ ಪ್ರಾಧಿಕಾರದ ಅಧಿಕಾರಿಗಳ ಮೀನಾ ಮೇಷದೊಂದಿಗೆ ಕುಂಟುತ್ತ ಸಾಗಿದ್ದ ವೀರಗಲ್ಲು ಸ್ಥಾಪನೆಗೊಂಡಿದ್ದು, ಡಿಸೆಂಬರ್ 16ರ ವಿಜಯ್ ದಿವಸ್‌ದಂದು ಉದ್ಘಾಟನೆಯ ಮೂಲಕ ಲೋಕಾರ್ಪಣೆಗೊಳ್ಳಲಿದೆ.

ರಾಷ್ಟ್ರೀಯ ಸೈನಿಕ ಸ್ಮಾರಕದಲ್ಲಿ ವೀರಗಲ್ಲು ನಿಲ್ಲಿಸುವ ಕಾಮಗಾರಿ ಕೆಲಸ ಪೂರ್ಣಗೊಂಡಿದ್ದು, ವಿಜಯ್ ದಿವಸ್ ದಂದೇ ನಿರ್ಮಾಣಕ್ಕೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಕಳೆದ ಜೂನ್ 25 ರಂದು ವೀರಗಲ್ಲನ್ನು ತಂದಿರಿಸುವಲ್ಲಿ ಬಿಡಿಎ ಅಧಿಕಾರಿಗಳ ತಂಡ ಯಶಸ್ವಯಾಗಿತ್ತು. ವೀರಗಲ್ಲನ್ನು ನಿಲ್ಲಿಸಲು ಬೃಹತ್ ಕ್ರೇನ್ ಮತ್ತು ಕಬ್ಬಿಣದ ಅಟ್ಟಣಿಗೆ ಬಳಕೆ ಮಾಡಿಕೊಂಡು ವೀರಗಲ್ಲು ನಿಲ್ಲಿಸುವ ಕೆಲಸಕ್ಕೆ ತಾಂತ್ರಿಕ ಅಡಚಣೆ ಉಂಟಾಗಿತ್ತು.

ಮಳೆಗಾಲ ಆರಂಭಗೊಂಡು ಸತತ ಎಡೆಬಿಡದೆ ಸುರಿದ ಮಳೆಯಿಂದಾಗಿ ವೀರಗಲ್ಲು ಸ್ಥಾಪನೆಯ ಸ್ಥಳದಲ್ಲಿ ತೇವಾಂಶ ಇದ್ದುದರಿಂದ ಕೆಲಸವನ್ನು ಮುಂದೂಡಲಾಗಿತ್ತು. ಹಲವು ತಜ್ಞರು ಮತ್ತು ನಿವೃತ್ತ ಸೇನಾಧಿಕಾರಿಗಳು ಹಾಗೂ ದೇಶ ಭಕ್ತರಿಂದ ಹಲವು ಭಾರಿ ಸರ್ಕಾರ ಮತ್ತು ಬಿಡಿಎ ಟೀಕೆಗೆ ಗುರಿಯಾಗಿತ್ತು.

ಮುಜುಗರದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ ವಿಜಯಭಾಸ್ಕರ್ ಅವರೇ ಖುದ್ದು ಮುಂದೆ ನಿಂತು ಸ್ಮಾರಕ ಸ್ಥಳದಲ್ಲೇ ಬಿಡಿಎ ಅಧಿಕಾರಿಗಳ ಸಭೆ ನಡೆಸಿ ಕಟ್ಟುನಿಟ್ಟಿನ ಸೂಚನೆ ನೀಡಿ ವಿಜಯ್ ದಿವಸ್‌ದಂದೇ ವೀರಗಲ್ಲು ಲೋಕಾರ್ಪಣೆಗೆ ಕಾಮಗಾರಿ ಪೂರ್ಣಗೊಳಿಸುವಂತೆ ತಾಕೀತು ಮಾಡಿದ್ದರ ಪ್ರತಿಫಲವಾಗಿ ವೀರಗಲ್ಲು ಲೋಕಾರ್ಪಣೆಗೆ ಸಜ್ಜುಗೊಂಡಿದೆ.

ವೀರಗಲ್ಲು ಸ್ಥಾಪನೆಯ ಹೊಣೆ ಹೊತ್ತಿದ್ದ ಬಿಡಿಎ, ದೇವನಹಳ್ಳಿ ತಾಲ್ಲೂಕಿನ ಕೋಯಿರಾ ಕ್ವಾರಿಯಲ್ಲಿ ವೀರಗಲ್ಲು ಕೆತ್ತನೆ ಕೆಲಸವನ್ನು 2014ಲ್ಲೇ ಪೂರ್ಣಗೊಳಿಸಿತ್ತು. 88 ಅಡಿ ಉದ್ದ ಹಾಗೂ 650 ಟನ್ ತೂಕದ ಬೃಹತ್ ಶಿಲೆಯನ್ನು ಸಾಗಣೆ ಮಾಡಲು ಸಾದ್ಯವಾಗದ ಕಾರಣ 75 ಅಡಿ ಉದ್ದ ಹಾಗೂ 450 ಟನ್‌ಗೆ ಸೀಮಿತಗೊಳಿಸಲಾಯಿತು.

ವೀರಗಲ್ಲನ್ನು ಸ್ಮಾರಕಕ್ಕೆ ರಸ್ತೆ ಮೂಲಕ ಸಾಗಿಸಲು 5.46 ಕೋಟಿ ವೆಚ್ಚದಲ್ಲಿ ಗುಜರಾತ್ ಮೂಲದ ಮೆ.ನೆಭ್ರೋಸ್ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. 240 ಚಕ್ರಗಳುಳ್ಳ ಬೃಹತ್ ಟ್ರಾಲಿಯಲ್ಲಿ ವಿಮಾನ ನಿಲ್ದಾಣ ರಸ್ತೆ ಮೂಲಕ ಸ್ಮಾರಕಕ್ಕೆ ಸಾಗಿಸಲಾಗಿತ್ತು.

ಫ್ರೆಶ್ ನ್ಯೂಸ್

Latest Posts

Featured Videos