ಜ.30 ಗಾಂಧೀಜಿಯ ಮುಖವಾಡ ಧರಿಸಿ ಮೌನ ಮೆರವಣಿಗೆ

ಜ.30 ಗಾಂಧೀಜಿಯ ಮುಖವಾಡ ಧರಿಸಿ ಮೌನ ಮೆರವಣಿಗೆ

ಕೋಲಾರ: ಜನವರಿ 30ರಂದು
ಗಾಂಧೀಜಿಯವರ ಹತ್ಯೆಯಾದ ದಿನವನ್ನು ಸೌಹಾರ್ದತೆಗಾಗಿ ಕರ್ನಾಟಕ ಹೆಸರಿನಲ್ಲಿ ಜಿಲ್ಲಾ ಕೇಂದ್ರದಲ್ಲಿ ಗಾಂಧೀಜಿಯವರ ಮುಖವಾಡ ಧರಿಸಿ ಬೃಹತ್ ಮೌನ ಮೆರವಣಿಗೆ ಮಾಡಲಾಗುತ್ತದೆ ಎಂದು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ತಿಳಿಸಿದರು.

ಇಂದು
ನಗರದ ನಚಕೇತನ ನಿಲಯದಲ್ಲಿ ಬುಧವಾರ ಜಿಲ್ಲೆಯ ಪ್ರಗತಿಪರ ಸಂಘಟನೆಗಳ ಸಭೆಯಲ್ಲಿ ಮಾತನಾಡುತ್ತಾ ಅವರು ಇವತ್ತು ದೇಶದಲ್ಲಿ ಅಂಬೇಡ್ಕರ್ ಮಾರ್ಕ್ಸ್ ಗೆ ಇರುವ ಅನುಯಾಯಿಗಳು ಗಾಂಧೀಜಿಗೆ ಇಲ್ಲವಾಗಿದ್ದು ಅವರಿಂದ ಲಾಭ ಪಡೆದು ಇಪ್ಪೆ ಮಾಡಿ ಕೇವಲ ಶರೀರವನ್ನು ಬಿಸಾಕಿದ್ದಾರೆ ಎಂದರು

ಜನರ ಮನಸ್ಸಿನಲ್ಲಿ ಗಾಂಧೀಜಿಯನ್ನು ನೆಲೆಸುವಂತೆ ಮಕ್ಕಳಿಂದ ಮಾಡಬೇಕಾಗಿದೆ ಅ ನಿಟ್ಟಿನಲ್ಲಿ ಮಕ್ಕಳಿಗೆ ಗಾಂಧೀಜಿಯವರ ಮುಖವಾಡಗಳನ್ನು ಧರಿಸಿ ನಗರದ ಗಾಂಧಿ ಪ್ರತಿಭೆಗೆ ಮಾಲಾರ್ಪಣೆ ಮಾಡಿ ನಚಿಕೇತನ ನಿಲಯದ ವರಗೆ ಮೌನ ಮೆರವಣಿಗೆ ನಡೆಯಲಿದೆ ಎಂದರು.

ದೇಶದಲ್ಲಿ ಒಬ್ಬ ಗಾಂಧೀಜಿಯನ್ನು ಕೊಂದಿರಬಹುದು ನಾವೆಲ್ಲ ನೂರಾರು ಗಾಂಧೀಜಿ ಎನ್ನುವ ಸಂದೇಶವನ್ನು ಜನಕ್ಕೆ ಸಾರಬೇಕಾಗಿದೆ ನಮ್ಮ ಆಲೋಚನೆಗಳು ವ್ಯರ್ಥವಾಗದ ರೀತಿಯಲ್ಲಿ ಮುಂದಿನ ಭವಿಷ್ಯವನ್ನು ಕಾಣಬೇಕಾಗಿದೆ ಎಂದರು.

ಶಾಂತಿ ಸೌಹಾರ್ದತೆ ಸಹಬಾಳ್ವೆ ಕನ್ನಡ ನಾಡು ಶತಮಾನಗಳಿಂದ ಹೆಸರುವಾಸಿಯಾಗಿತ್ತು ಸರ್ವ ಜನಾಂಗದ ಶಾಂತಿಯ ತೋಟ ಎನ್ನುವ ಪರಂಪರೆ ನಾಶವಾಗಿ ಕೋಮುವಾದಿಗಳು ಹೆಚ್ಚಾಗುತ್ತಾ ಇದ್ದಾರೆ ಅದರ ವಿರುದ್ದವಾಗಿ ಸೌಹಾರ್ದತೆಗಾಗಿ ಕೋಲಾರ ಕಾರ್ಯಕ್ರಮ ಮಾಡಲಾಗುತ್ತಾ ಇದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ
ನಗರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಪಿ.ಶ್ರೀನಿವಾಸ್ ಜೆಎಂಎಸ್ ರಾಜ್ಯ ಅಧ್ಯಕ್ಷೆ ವಿ.ಗೀತಾ, ಎಸ್ ಎಫ್ ಐ ರಾಜ್ಯ ಅಧ್ಯಕ್ಷ ವಿ.ಅಂಬರೀಶ್, ಮುಖಂಡರಾದ ಟಿ.ಎಮ್ ವೆಂಕಟೇಶ್, ವಿಜಯಕೃಷ್ಣ ದಸಂಸಯ ಅವಣಿ ಕಾಶಿ,ಆದಿವಾಸಿ ಹಕ್ಕುಗಳ ಎಂ ಕೃಷ್ಣಪ್ಪ, ಮುನಿರಾಜಮ್ಮ,‌ ನಾರಾಯಣರೆಡ್ಡಿ, ಲಕ್ಷ್ಮಣ್ ಮುಂತಾದವರು ಭಾಗವಹಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos