ಖಾಸಗಿ ಬಸ್ ಹರಿದು ವಿದ್ಯಾರ್ಥಿಗೆ ಗಾಯ

ಖಾಸಗಿ ಬಸ್ ಹರಿದು ವಿದ್ಯಾರ್ಥಿಗೆ ಗಾಯ

ಮಧುಗಿರಿ: ಖಾಸಗಿ ಬಸ್ ಹರಿದು ವಿದ್ಯಾರ್ಥಿಯೋರ್ವ ತೀವ್ರ ಗಾಯಗೊಂಡಿರುವ ಘಟನೆ ತಾಲ್ಲೂಕಿನ ದೊಡ್ಡೇರಿ ಹೋಬಳಿಯ ಬಡವನಹಳ್ಳಿ ಚೆಕ್‌ಪೋಸ್ಟ್ ಬಳಿ ನಡೆದಿದೆ. ಶಾಲಾ ಮೈದಾನದಲ್ಲಿ ಆಟವಾಡಿ ವಾಪಸ್ ಮನೆಗೆ ತೆರಳುತ್ತಿದ್ದ ಅಭಿಲಾಷ್ (6) ಲೋಕಪಾಲ್ ಶಾಲೆಯ ವಿದ್ಯಾರ್ಥಿ ರಸ್ತೆ ದಾಟುವಾಗ ಖಾಸಗಿ ಬಸ್ ಹರಿದು ತೀವ್ರ ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಅಭಿಲಾಷ್‌ನನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಬಡವನಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos