ವ್ಯಕ್ತಿಯ ಬರ್ಬರ ಹತ್ಯೆ

ವ್ಯಕ್ತಿಯ ಬರ್ಬರ ಹತ್ಯೆ

ಬೆಂಗಳೂರು, ಜ. 12 : ಹಳೆಯ ದ್ವೇಷಕ್ಕೆ, ಕುಡಿದ ಮತ್ತಿನಲ್ಲಿ ಕೊಲೆಗಳು ನಡೆದು ಹೋಗುತ್ತವೆ. ಭಾನುವಾರ ಬೆಳಗ್ಗೆ ಕೂಡ ಬೆಂಗಳೂರಿನಲ್ಲಿ ಬರ್ಬರ ಹತ್ಯೆ ನಡೆದಿದೆ. ಹಳೆಯ ದ್ವೇಷಕ್ಕೆ ನಡು ರಸ್ತೆಯಲ್ಲೇ ಕೊಲೆ ನಡೆದಿದೆ.

ಸುಹೇಬ್ ಪಾಷಾ ಕೊಲೆಯಾದ ವ್ಯಕ್ತಿ. ಜೆಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮುಂಜಾನೆ ನಾಲ್ಕುವರೆ ಗಂಟೆ ಸುಮಾರಿಗೆ ಘಟನೆ ನಡೆದಿದೆ.

ಜೆಜೆ ನಗರದ ಹಳೆ ಗುಡ್ಡದಹಳ್ಳಿಯಲ್ಲಿ ಈ ಕೊಲೆ ನಡೆದಿದೆ. ಸುಹೇಬ್ ಪಾಷಾ. ಈ ಹಿಂದೆ ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದ. ಮೃತದೇಹ ವಿಕ್ಟೋರಿಯಾ ಅಸ್ಪತ್ರೆಗೆ ರವಾನೆ ಮಾಡಲಾಗಿದೆ. ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos