ಆದ್ವೀತಿಯರ ಒಂದು ಸ್ಮರಣೆ ಕಾರ್ಯ

ಆದ್ವೀತಿಯರ ಒಂದು ಸ್ಮರಣೆ ಕಾರ್ಯ

ದೇವನಹಳ್ಳಿ, ಸೆ. 9: ಮಾಜಿ ಕೇಂದ್ರ ಸಚಿವರಾಗಿದ್ದ ಸುಷ್ಮಾಸ್ವರಾಜ್, ಅರುಣ್ ಜೆಟ್ಲಿ, ಅನಂತ್‌ ಕುಮಾರ್ ಹಾಗೂ ಮನೋಹರ್ ಪರಿಕರ್ ರಾಷ್ಟ್ರದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಯನ್ನು ನೀಡಿ ತಮ್ಮ ಛಾಪನ್ನು ಮೂಡಿಸಿದ್ದರು ಎಂದು ಆರ್‌ಎಸ್‌ಎಸ್ ಪ್ರಮುಖ್ ಕೇಶವ ಪ್ರಸಾದ್ ತಿಳಿಸಿದರು.

ನಗರದ ಗುರುಭವನದಲ್ಲಿ ಪರಿಮಿತಿ ಸ್ನೇಹಕೂಟ ವತಿಯಿಂದ ಹಮ್ಮಿಕೊಂಡಿದ್ದ ಆದ್ವೀತಿಯರ ಒಂದು ಸ್ಮರಣೆ ಕಾರ್ಯದಲ್ಲಿ ಕೇಂದ್ರ ಮಾಜಿ ಸಚಿವರಾಗಿದ್ದ ಅನಂತಕುಮಾರ್, ಸುಷ್ಮಾ ಸ್ವರಾಜ್, ಅರುಣ್‌ಜೆಟ್ಲಿ, ಮನೋಹರ್ ಪರಿಕಾರ್ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಭಾರತ ರಾಜಕಾರಣದಲ್ಲಿ ನಾಲ್ಕು ಮಹನೀಯರು ತಮ್ಮದೇ ಆದ ಆದರ್ಶಗಳನ್ನು ಅಳವಡಿಸಿಕೊಂಡು ತಮ್ಮ ರಾಜಕೀಯ ಜೀವನದಲ್ಲಿ ಪ್ರಾಮಾಣಿಕವಾಗಿ ಜನರಿಗಾಗಿ ಉತ್ತಮ ಆಡಳಿತವನ್ನು ನೀಡಿರುತ್ತಾರೆ. ಇಂದಿಗೂ ಜನರ ಮನಸ್ಸಿನಲ್ಲಿ ಉಳಿಯುವಂತೆ ಮಾಡಿದ್ದಾರೆ. ಕೇಂದ್ರ ವಿದೇಶಾಂಗ ಸಚಿವರಾಗಿದ್ದ ಸುಷ್ಮಾ ಸ್ವರಾಜ್ ಕಾರ್ಯಕರ್ತರೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡಿದ್ದರು. ವಿದೇಶಾಂಗ ಸಚಿವರಾಗಿ ಉತ್ತಮ ಕೆಲಸವನ್ನು ಮಾಡಿ ತೋರಿಸಿದ್ದಾರೆ. ಕೇಂದ್ರ ಹಣಕಾಸು ಸಚಿವ ಅರುಣ್‌ ಜೆಟ್ಲಿ ಉತ್ತಮ ಆರ್ಥಿಕ ತಜ್ಞರಾಗಿ ಆರ್ಥಿಕತೆಗೆ ಹೆಚ್ಚಿನ ಒತ್ತನ್ನು ನೀಡಿದ್ದರು. ಪಕ್ಷದ ತತ್ವ ಸಿದ್ಧಾಂತಗಳಡಿಯಲ್ಲಿ ಪಕ್ಷ ಸಂಘಟನೆಯನ್ನು ಮಾಡಿದ ವ್ಯಕ್ತಿಯಾಗಿದ್ದರು.

ಅನಂತಕುಮಾರ್ ಕೇಂದ್ರ ರಸಗೊಬ್ಬರ ಸಚಿವರಾಗಿ ಹಾಗೂ ಇತರೆ ಸಚಿವ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಜನಪರ ಆಡಳಿತಗಾರರಾಗಿದ್ದೇ ಅಲ್ಲದೆ ಸರಳ ಸ್ವಭಾವದ ಸಜ್ಜನಿಕೆಯ ವ್ಯಕ್ತಿಯೆನಿಸಿಕೊಂಡ ರಾಜಕಾರಣಿಯಾಗಿದ್ದರು. ಮನೋಹರ್ ಪರಿಕಾರ್ ಗೋವಾ ರಾಜ್ಯದ ಮುಖ್ಯಮಂತ್ರಿಯಾಗಿ ಹಾಗೂ ಕೇಂದ್ರ ರಕ್ಷಣಾ ಸಚಿವರಾಗಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ ಎಂದು ಹೇಳಿದರು.

ಈ ನಾಲ್ಕು ವ್ಯಕ್ತಿಗಳು 10 ರಿಂದ 15 ವರ್ಷ ನಮ್ಮ ಜೊತೆ ಇದ್ದರೆ ರಾಷ್ಟ್ರ ಮತ್ತಷ್ಟು ಅಭಿವೃದ್ಧಿ ಪಥದತ್ತ ಸಾಗುತ್ತಿತ್ತು. ಅವರು ಹಾಕಿಕೊಟ್ಟ ಮಾರ್ಗದರ್ಶನ ದಾರಿ ದೀಪವಾಗಿದೆ. ಅನಂತಕುಮಾರ್ 59 ವರ್ಷ, ಮನೋಹರ್‌ ಪರಿಕರ್ 64 ವರ್ಷ, ಅರುಣ್‌ ಜೆಟ್ಲಿ 66 ವರ್ಷ, ಸುಷ್ಮಾಸ್ವರಾಜ್ 67 ವರ್ಷ ಈ ವಯಸ್ಸಿನಲ್ಲಿದ್ದವರು ಆಗಿದ್ದಾರೆ. ಇವರ ನಿಧನಗಳಿಂದ ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಪಕ್ಷ ಸಂಘಟನೆಯಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ ವ್ಯಕ್ತಿಗಳಾಗಿದ್ದಾರೆ ಎಂದು ಹೇಳಿದರು.

ಶಿಕ್ಷಕ ಸುಭ್ರಮಣಿ ಬೆಳ್ಳಿ ಅವರಿಂದ ಗೀತವಾಚನ ಏರ್ಪಡಿಸಲಾಗಿತ್ತು. ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಜಿ.ಚಂದ್ರಣ್ಣ, ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ರಾಜಣ್ಣ, ಪ್ರಧಾನ ಕಾರ್ಯದರ್ಶಿ ನಾರಾಯಣಸ್ವಾಮಿ, ತಾಲೂಕು ಪ್ರಧಾನ ಕಾರ್ಯದರ್ಶಿ ಸುನಿಲ್, ಮುಖಂಡರಾದ ರಂಗಸ್ವಾಮಿ, ಸುರೇಶಾಚಾರ್, ಲೋಹಿತ್, ಗೋಕರೆ ಗೋಪಾಲ್, ಮುರಳಿ, ಮತ್ತಿತರರು ಇದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos