ಪಟಾಕಿ ಶಾಪ್ ನಲ್ಲಿ ಬಾರಿ ಪ್ರಮಾಣದ ಬೆಂಕಿ ಅವಘಡ, 10 ಜನ ಭಸ್ಮ

ಪಟಾಕಿ ಶಾಪ್ ನಲ್ಲಿ ಬಾರಿ ಪ್ರಮಾಣದ ಬೆಂಕಿ ಅವಘಡ, 10 ಜನ ಭಸ್ಮ

ಬೆಂಗಳೂರು: ಪಟಾಕಿ ಶಾಪ್ ನಲ್ಲಿ ಬಾರಿ ಪ್ರಮಾಣದ ಬೆಂಕಿ ಅವಘಡ. ಕೋಟ್ಯಾಂತರ ರೂಪಾಯಿ ಮೌಲ್ಯದ ಪಟಾಕಿ ಸುಟ್ಟು ಭಸ್ಮವಾಗಿದೆ. ಮೂರು ಬೃಹತ್ ಗಾತ್ರದ ವಾಹನ ಮತ್ತು ಐದು ಬೈಕ್ ಗಳು ಬೆಂಕಿಗಾಹುತಿಯಾಗಿದ್ದು, 10 ಸಿಬ್ಬಂದಿ ಸಜೀವ ದಹನವಾಗಿದೆ.

ಇಂದು ಶನಿವಾರ ಸುಮಾರು ಮಧ್ಯಾಹ್ನದ 3 ಘಂಟೆಯ ಸಮಯ ಪಟಾಕಿ ಶಾಪ್ ನಲ್ಲಿ ಬಾರಿ ಪ್ರಮಾಣದ ಬೆಂಕಿ ಅವಘಡ ಸಂಭವಿಸಿದೆ. ಗೋಡೌನ್ ನಲ್ಲಿ ಲೋಡ್ ಮಾಡಿದ್ದ ಪಟಾಕಿ ಸ್ಪೋಟಗೊಂಡಿದೆ. ಅಗ್ನಿ ದುರಂತದಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಪಟಾಕಿ ಹಾಗೂ ಪಟಾಕಿ ಶಾಪ್ ಮುಂದೆ ನಿಂತಿದ್ದ ಒಂದು ಕ್ಯಾಂಟ್ರೋ ಎರಡು ಬುಲೇರೋ ವಾಹನ, ಐದು ಬೈಕ್ ಗಳು ಧಗಧಗೆನೆ ಹೊತ್ತಿ ಉರಿದಿವೆ. ಪಟಾಕಿ ಮಳಿಗೆಯಲ್ಲಿ10 ಜನ ಸಜೀವ ದಹನವಾಗಿದೆ. ಅಗ್ನಿಶಾಮಕ ಠಾಣಾ ಸಿಬ್ಬಂದಿ ಕಾರ್ಯಾಚರಣೆ ಮುಂದುವರೆಸಿದ್ದಾರೆ.

ಧಗಧಗನೆ ಹೊತ್ತಿಉರಿಯುತ್ತಿರೋ ಪಟಾಕಿ ಮಳಿಗೆ, ಇನ್ನೊಂದೆಡೆ ಬೆಂಕಿಯನ್ನ ನಂದಿಸಲು ಹರಸಾಹಸ ಪಡುತ್ತಿರುವ ಅಗ್ನಿಶಾಮಕ ದಳ ಸಿಬ್ಬಂದಿ. ಹೆದ್ದಾರಿಯಲ್ಲಿ ಸೇರಿರೋ ಸಾವಿರಾರು ಜನರನ್ನ ನಿಯಂತ್ರಿಸಲು ಪರದಾಟ ನಡೆಸುತ್ತಿರೋ ಪೊಲೀಸರು. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಬೆಂಗಳೂರು ಹೊಸೂರು ರಾಷ್ಟ್ರೀಯ ಹೆದ್ದಾರಿ ರಾಜ್ಯ ಗಡಿಭಾಗದ ಅತ್ತಿಬೆಲೆಯಲ್ಲಿ. ಪಟಾಕಿ ಶಾಪ್ ಮಾಲೀಕ ನವೀನ್ ಶಿವಕಾಶಿಯಿಂದ ಒಂದು ಕ್ಯಾಂಟ್ರೋ ಎರಡು ಬುಲೇರೋ ವಾಹನಗಳಲ್ಲಿ ಪಟಾಕಿಯನ್ನ ತರಿಸಿಕೊಂಡು ಮಧ್ಯಾಹ್ನ ಮೂರು ಗಂಟೆಯ ಸುಮಾರಿಗೆ ಗೋಡೌನ್ ನಲ್ಲಿ ಅನ್ ಲೋಡ್ ಮಾಡುವ ವೇಳೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ.

ಬೆಂಕಿಯ ಕೆನ್ನಾಲಿಗೆ ಕ್ಷಣಾರ್ಧಲ್ಲಿ ಇಡೀ ಮಳಿಗೆಯನ್ನ ಆವರಿಸಿದ್ದು ಬಾರಿ ಪ್ರಮಾಣದ ಪಟಾಕಿ ಸ್ಪೋಟಗೊಂಡು ಧಗಧಗನೆ ಬೆಂಕಿ ಹೊತ್ತಿ ಉರಿದಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಪಟಾಕಿ ಗೋಡೌನ್ ನಲ್ಲಿದ್ದ ಸುಮಾರು ಇಪ್ಪತ್ತು ಮಂದಿಯ ಪೈಕಿ ಹದಿನೈದು ಮಂದಿ ಹೊರಗೆ ಬಂದಿದ್ದಾರೆ. ಆದ್ರೆ ಉಳಿದ ಐದು ಮಂದಿ ಹೊರಗೆ ಬರಲಾಗದೆ ಪಟಾಕಿ ಗೋಡೌನ್ ನಲ್ಲಿಯೇ ಸಜೀವ ದಹನವಾಗಿರುವ ಶಂಕೆ ಇದ್ದು, ಸದ್ಯ 10 ಮಂದಿ ಕಾರ್ಮಿಕರ ಶವವನ್ನ ಹೊರತೆಗೆದಿರುವ ಅಗ್ನಿಶಾಮಕ ಠಾಣಾ ಸಿಬ್ಬಂದಿ ಕಾರ್ಯಾಚರಣೆ ಮುಂದುವರೆಸಿದ್ದಾರೆ.

 

 

ಫ್ರೆಶ್ ನ್ಯೂಸ್

Latest Posts

Featured Videos