ತಪ್ಪಿದ ಭಾರಿ ಅನಾಹುತ

ತಪ್ಪಿದ ಭಾರಿ ಅನಾಹುತ

ಕೃಷ್ಣರಾಜಪುರ, ಅ. 15: ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಸ್ಸಿನ ಮೇಲೆ 50 ವರ್ಷದ ಹಳೆಯ ಮರ ಉರುಳಿ ಬಿದಿದ್ದು, ಕೂದಲೆಳೆಯಲ್ಲಿ ಅಪಘಾತದಿಂದ 36 ಮಕ್ಕಳು ಪಾರಾಗಿದ್ದಾರೆ.

ವರ್ತೂರು ಸಮೀಪವಿರುವ ದಿ ಇಂಟರ್ ನ್ಯಾಷನಲ್ ಸ್ಕೂಲ್ ಆಪ್ ಬೆಂಗಳೂರು ಶಾಲಾಯ ವಾಹನವು ಮಕ್ಕಳನ್ನು ವರ್ತೂರಿನಿಂದ ವರ್ತೂರು ಕೊಡಿ.  ರಾಮಗೊಂಡನಹಳ್ಳಿ ಕಡೆಗೆ ಕರೆದೊಯ್ಯುತ್ತಿದ್ದ ವೇಳೆ ಸರ್ಜಾಪುರ. ಹೊಸಕೋಟೆ ಮುಖ್ಯ ರಸ್ತೆಯ ವರ್ತೂರಿನ ವಿನಾಯಕ ಟೇಟರ್ ಬಳಿ ಮರ ಉರುಳಿ ಬಿದ್ದ ಪರಿಣಾಮ ಟೆಂಪೋ ಮತ್ತು ಬಸ್ಸಿನ ಮುಂಬಾಗ ಜಖಂ ಅಗಿವೆ. ಅದೃಷ್ಟ ವಶ ಯಾರಿಗೂ ತೋಂದರೆಯಾಗಿಲ್ಲ.

ಮರದ ಬಳಿ ಟೆಂಪೋವನ್ನು ನಿಲ್ಲಿಸಲಾಗಿತ್ತು. ಬೃಹತ್ ಮರ ಉರುಳಿ ಮೊದಲು ಟೆಂಪೋ ಮೇಲೆ ಬಿದ್ದಿದ್ದು, ಚಲಿಸುತ್ತಿದ್ದ ಬಸ್ಸನ್ನು

ಚಾಲಕ ಸಿದ್ದೇಶ್ ಸಮಯ ಪ್ರಜ್ಞೆ ಯಿಂದ ಕೂಡಲೇ ನಿಲ್ಲಿಸಿದ್ದರಿಂದ ಭಾರಿ ಅನಾಹುತ ತಪ್ಪಿದೆ. ಬಸ್ಸ್ ನ ಮುಂಭಾಗದಲ್ಲಿ ಮರ ಬಿದ್ದಿರುವುದರಿಂದ ಮಕ್ಕಳಿಗೆ ಯಾವುದೇ ಅಪಾಯವಾಗಲಿಲ್ಲ. ಬಸ್ಸ್ ನ ಮುಂಭಾಗದಲ್ಲಿ ಕುಳಿತಿದ್ದ ನಿವಾರ್ಹಕಿ ಮತ್ತು ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಗಾಬರಿಯಾದ ಮಕ್ಕಳು

ಏಕಾಏಕಿ ಮರ ಶಾಲಾ ಬಸ್ಸಿನ ಮೇಲೆ ಉರುಳಿ ಬಿದ್ದಿದ್ದರಿಂದ ಬಸ್ಸಿನಲ್ಲಿದ್ದ  36 ಮಕ್ಕಳು ಗಾಬರಿಯಿಂದ ಕಿರುಚಾಡಿದ್ದಾರೆ. ಕೂಡಲೇ ಸ್ಥಳೀಯ ನಿವಾಸಿ ವೆಂಕಟೇಶ್ ಇವರ ನೆರವಿಗೆ ಬಂದು  ಚಾಲಕನ ಹಿಂಬದಿಯ ಗ್ಲಾಸ್ ಹೊಡೆದುಹಾಕಿ ಮಕ್ಕಳನ್ನು ಬಸ್ಸಿನಿಂದ ಹೊರ ಕಳುಹಿಸಿದ್ದಾರೆ. ಬಸ್ಸಿನ ಹಿಂದೆ ಬರುತ್ತಿದ್ದ ಅದೇ ಶಾಲೆಯ ಬೇರೆ ಬಸ್ಸು ಗಳಲ್ಲಿ ಮಕ್ಕಳನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿದ್ದಾರೆ. ಸರ್ಜಾಪುರ ಮತ್ತು ಹೊಸಕೋಟೆ ಮುಖ್ಯ ರಸ್ತೆಯಲ್ಲಿ  ಮರ ಉರುಳಿ ಬಿದ್ದಿದರಿಂದ ಸುಮಾರು 4ಕಿ.ಮೀಟರ್ ಸಂಚಾರ ದಟ್ಟಣೆ ಉಂಟಾಗಿತ್ತು.

ಕೂಡಲೇ ಸ್ಥಳಕ್ಕೆ ಆಗಮಿಸಿದ ವೈಟ್ ಫೀಲ್ಡ್ ಪೋಲಿಸರು. ವರ್ತೂರು ಪೋಲಿಸರು. ಮತ್ತು ಅಗ್ನಿಶಾಮಕದಳದ ಅಧಿಕಾರಿಗಳು ಕ್ರೈನ್ ಮೂಲಕ ಮರವನ್ನು ತೆರವುಗೊಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos