ಅಬ್ಬಿ ಜಲಪಾತದಲ್ಲಿ ಪ್ರವಾಸಿಗರ ದಂಡು

ಅಬ್ಬಿ ಜಲಪಾತದಲ್ಲಿ ಪ್ರವಾಸಿಗರ ದಂಡು

ಮಡಿಕೇರಿ, ಡಿ. 31: 2019ರ ಕೂನೆಯ ದಿನ ಆಗಿದ್ದು, ಎಲ್ಲೆಲ್ಲೂ ಹೂಸ ವರ್ಷದ ನಿರೀಕ್ಷೆಯಲ್ಲಿ ಜನರು ಕಾತರದಿಂದ ಕಾಯುತ್ತಿದ್ದಾರೆ. ಹಬ್ಬದ ಸಂಭ್ರಮ ಎಲ್ಲೆಲ್ಲೂ ಕಂಡು ಬರುತ್ತಿದೆ. ಪ್ರಕೃತಿಯ ತವರು, ಹಸಿರಸಿರಿಯ ನಡುವೆ ಸುಂದರ ಪ್ರವಾಸಿತಾಣಗಳನ್ನು ಹೂಂದಿರುವ ಕೊಡಗಿನಲ್ಲಂತೂ ಜನರು ಹರ್ಷದ ಹೂಳೆಯಲ್ಲಿ ತೇಲುತ್ತಿದ್ದಾರೆ.

ಮಂಜಿನ ನಗರಿ ಮಡಿಕೇರಿಯಲ್ಲಿ ಪ್ರವಾಸಿಗರ ದಂಡು ಆಗಮಿಸುತ್ತಿದೆ. ಅಬ್ಬಿ ಜಲಪಾತದಲ್ಲಿ 2019ಕ್ಕೆ ವಿದಾಯ ಹೇಳುವುದಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿಯಿದೆ. ಎಲ್ಲರೂ ಹೂಸ ವರ್ಷದ ನಿರೀಕ್ಷೆಯಲ್ಲಿದ್ದಾರೆ.

ಹಲವು ಸಿಹಿಕಹಿಗಳನ್ನೆಲ್ಲಾ ಹುದುಗಿಸಿಕೂಂಡು ತೆರೆಮರೆಗೆ ಸರಿಯುತ್ತಿರುವ 2019ಕ್ಕೆ ಗುಡ್‍ಬೈ ಹೇಳಲು ದೇಶದ ನಾನಾ ಭಾಗಗಳಿಂದ ಜನರು ಪ್ರಕೃತಿ ತವರು ಮಡಿಕೇರಿಗೆ ಲಗ್ಗೆಯಿಟ್ಟಿದ್ದಾರೆ. ನಿಸರ್ಗದ ಮಡಿಲಲ್ಲಿ ಹೂಸ ವರ್ಷಕ್ಕೆ ಸ್ವಾಗತ ಕೋರಲು ಪ್ರವಾಸಿಗರು ಸಜ್ಜಾಗಿದ್ದಾರೆ.

ಸುತ್ತಲೂ ಹಚ್ಚ ಹಸಿರಿನಿಂದ ಕಂಗೂಳಿಸುವ ಕಾನನ ನಡುವೆ ಹಾಲ್ನೊರೆಯಂತೆ ಭೋರ್ಗರೆಯುತ್ತಾ ಧುಮ್ಮಿಕ್ಕೋ ಜಲಧಾರೆ ಇನ್ನೇನು ಬೇಕು ಹೇಳಿ. ಇಷ್ಟು ಸಾಕಲ್ಲವೆ? ಒಂದು ಇಯರ್ ಎಂಡ್ ಅನ್ನು ರಸಭರಿತವಾಗಿ ನಂತರ ಪಾರ್ಟಿಗಳಲ್ಲಿ ಎಂಜಾಯ್ ಮಾಡಲು ಸಜ್ಜಾಗಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos