ಡೆಂಗ್ಯೂ ಜ್ವರಕ್ಕೆ ಬಾಲಕಿ ಸಾವು

ಡೆಂಗ್ಯೂ ಜ್ವರಕ್ಕೆ ಬಾಲಕಿ ಸಾವು

ಬೆಳಗಾವಿ, ಸೆ. 27: ಪ್ರವಾಸ ಸಂಕಷ್ಟ ನೀಗುವ ಮುನ್ನವೇ ಬೆಳಗಾವಿ ಜನತೆಗೆ ಡೆಂಗ್ಯೂ ಮಹಾಮಾರಿ ಆತಂಕ ಮೂಡಿಸಿದೆ.. ಡೆಂಗ್ಯೂ ಜ್ವರಕ್ಕೆ ಬಾಲಕಿಯೊಬ್ಬಳು ಸಾವನ್ನಪ್ಪಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ..

ಲಕ್ಷ್ಮೀನಗರದ ನಿವಾಸಿ 11 ವರ್ಷದ ರೂಪಾ ಮೊರಕರ್ ಡೆಂಗ್ಯೂ ಜ್ವರಕ್ಕೆ ಬಳಿಯಾದ ಬಾಲಕಿಯಾಗಿದ್ದಾಳೆ. ಕಳೆದ ಕೆಲ ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ರೂಪಾಳನ್ನ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದಾಳೆ. ಬಾಲಕಿ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಫ್ರೆಶ್ ನ್ಯೂಸ್

Latest Posts

Featured Videos