107 ಡಿಸ್ಕೋಥೆಕ್ ಬಾರ್ ಗಳ ಬಂದ್!

107 ಡಿಸ್ಕೋಥೆಕ್ ಬಾರ್ ಗಳ ಬಂದ್!

ಬೆಂಗಳೂರು, ಸೆ. 3: ಇಡೀ ಪೋಲಿಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಸಿಲಿಕಾನ್ ಸಿಟಿಯಲ್ಲಿ 107 ಡಿಸ್ಕೋಥೆಕ್ ಹಾಗೂ ಡ್ಯಾನ್ಸ್ ಬಾರುಗಳನ್ನು ಒಂದೇ ದಿನ ಏಕ ಕಾಲಕ್ಕೆ ಬಂದ್ ಮಾಡಿಸಲಾಗಿದೆ. ಸುಪ್ರೀಂ ಕೋಟ್೯ ಮತ್ತು ಹೈಕೋರ್ಟ್ ನಿಯಮಗಳನ್ನು ಉಲ್ಲಂಘನೆ ಮಾಡಿ ನಡೆಸುತ್ತಿದ್ದ ಎಲ್ಲಾ ಪ್ರತಿಷ್ಟಿತ ಡಾನ್ಸ್ ಬಾರ್ ಮತ್ತು ಡಿಸ್ಕೊಥೆಕ್ ಗಳನ್ನು ಮುಚ್ಚಿಸಲು ಆಯಾ ವ್ಯಾಪ್ತಿಯ ಡಿಸಿಪಿಗಳಿಗೆ ಸೂಚನೆ ನೀಡಲಾಗಿದೆ.

ಮತ್ತೆ ಬಿಂದಾಸ್ ಆಗಿ ತಲೆ ಎತ್ತಿದ್ದ ಡಾನ್ಸ್ ಬಾರ್ ಗಳ ಮೇಲೆ ಅಪರಾಧ ವಿಭಾಗದ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದ ತಂಡ 107 ಕೇಂದ್ರಗಳನ್ನು ಮುಚ್ಚಲು ಆದೇಶ ಮಾಡಿದ್ದಾರೆ.

ನಿಯಮಗಳ ಪ್ರಕಾರ ಕಮಿಷನರೇಟ್ ವ್ಯಾಪ್ತಿಯಲ್ಲಿ ಡಾನ್ಸ್ ಬಾರ್ ನಡೆಸಲು ನಗರ ಪೋಲಿಸ್ ಆಯುಕ್ತರ ಪರವಾನಗಿ ಪಡೆಯುವುದು ಕಡ್ಡಾಯ. ಆದರೆ, ಪರವಾನಗಿ ಪಡೆಯದೇ ನೂರಾರು ಡಾನ್ಸ್ ಬಾರ್ ಗಳು ರಾತ್ರಿವೇಳೆ ‌ಕಾರ್ಯಚಟುವಟಿಕೆಯಲ್ಲಿ ತೊಡಗಿದ್ದವು. ಕೆಲವೊಂದು ಷರತ್ತುಗಳನ್ನು ವಿಧಿಸಿ ಕೆಲವು ಡಿಸ್ಕೊಥೆಕ್ ಗಳಿಗೆ ತಾತ್ಕಾಲಿಕ ಅನುಮತಿ ನೀಡಲಾಗಿತ್ತಾದರೂ ಅವುಗಳು ನಿಯಮ ಬಾಹೀರವಾಗಿ ಬಿಂದಾಸ್ ಕಾರ್ಯಾಚರಣೆಯಲ್ಲಿ ತೊಡಗಿದ್ದವು.

ಡಾನ್ಸ್ ಬಾರ್ ಮಾಲೀಕರು ನ್ಯಾಯಾಲಯದ ಮೊರೆ ಹೊಕ್ಕಿದಾಗ ಯುವತಿಯರನ್ನು ನೃತ್ಯ ಕಲಾವಿದರೆಂದು ಬಿಂಬಿಸಿ ಅವರ ಜೀವನೋಪಾಯ ಮತ್ತು‌ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆಯ ಕುರಿತು ವಾದಿಸಿದ್ದರು. ಬಹಳಷ್ಟು ಮಾಲೀಕರು ನಿಜವಾದ ಅರ್ಥದಲ್ಲಿ ಯಾವುದೇ ನಿಯಮವನ್ನು ಪಾಲಿಸುತ್ತಿರಲಿಲ್ಲ. ಯುವತಿಯರನ್ನು ಕೇವಲ ಗ್ರಾಹಕರನ್ನು ಆಕರ್ಷಿಸಲು ಮತ್ತು ವೇಶ್ಯಾವಾಟಿಕೆಗೆ ಸರಕುಗಳಂತೆ ಉಪಯೋಗಿಸಿಕೊಳ್ಳುತ್ತಿರುವ ಬಗ್ಗೆ ದೂರುಗಳು ದಾಖಲಾಗಿದ್ದವು. ಡಾನ್ಸ್ ಬಾರ್ ಗಳ ಬಗ್ಗೆ ವರದಿ ತರಿಸಿಕೊಂಡ ನಗರ ಪೋಲಿಸ್ ಆಯುಕ್ತ ಭಾಸ್ಕರ್ ರಾವ್ ಅವರ ಸೂಚನೆ ಮೇರೆಗೆ ಅಪರಾಧ ವಿಭಾಗದ ಜಂಟಿ ಪೋಲಿಸ್ ಆಯುಕ್ತ ಸಂದೀಪ್ ಪಾಟೀಲ್ ದೃಡ ನಿರ್ಧಾರ ಕೈಗೊಂಡು ಬಂದ್ ಮಾಡಿಸಿದ್ದಾರೆ.

ಸಾರ್ವಜನಿಕ ಮನರಂಜನಾ ನಿಯಮಾವಳಿ 2005 ನಿಯಮಾವಳಿ ಉಲ್ಲಂಘನೆ ಮಾಡಿದ್ದಕ್ಕಾಗಿ 107 ಡಿಸ್ಕೊಥೆಕ್, ಪಬ್ ಗಳ ಮೇಲೆ ಕಾರ್ಯಾಚರಣೆ ಆದೇಶ ರದ್ದುಗೊಳಿಸಿ ಆದೇಶ ಹೊರಡಿಸಲಾಗಿದೆ. ಆದರೆ ಈ ಎಲ್ಲಾ 107 ಪಬ್ ಗಳು ಮಾಮೂಲಿಯಂತೆ ಅಬಕಾರಿ ಪರವಾನಗಿ ಆಧಾರದಲ್ಲಿ ಮದ್ಯವ್ಯಾಪಾರ ಮಾಡಬಹುದು, ರೆಸ್ಟೊರೆಂಟ್ ಗಳನ್ನು ನಡೆಸಬಹುದು ಲೈವ್ ಮ್ಯೂಸಿಕ್ ಮತ್ತು ಡಿಸ್ಕೊಥೆಕ್ ಹಾಗೂ ಯುವತಿಯರಿಂದ ಅಶ್ಲೀಲ ನೃತ್ಯ ಮಾತ್ರ ಕಟ್ಟು ನಿಟ್ಟಾಗಿ ನಡೆಸುವಂತಿಲ್ಲ ಎಂದು ಅಪರಾಧ ವಿಭಾಗದ ಅಧಿಕಾರಿಗಳು ನೀಡಿರುವ ಆದೇಶದಲ್ಲಿ ಸುಚಿಸಿದ್ದಾರೆ.

ಈ ಪೋಲಿಸರು ನೀಡಿರುವ ಕಟ್ಟುನಿಟ್ಟಿನ ಆದೇಶ ಅಳಿಯ ಅಲ್ಲ ಮಗಳ ಗಂಡ ಅನ್ನುವಂತಿದೆ. ಅಷ್ಟು ಸಾಕು ಇವರಿಗೆ ಯಾವಾಗಲೂ ಪೋಲಿಸರು ಏನ್ ಬಂದು ಕಾವಲಿರಲು ಸಾದ್ಯನಾ ಎಂಬ ಅಭಿಪ್ರಾಯಗಳು ಬಾರ್ ಮತ್ತು ರೆಸ್ಟೊರೆಂಟ್ ಮಾಲೀಕರಿಗೆ ಹೋದ ಜೀವ ಬಂದಂತಾಗಿದೆ. ಹೀಗೆ ತರೆ ಮರೆಯಲ್ಲಿ ಡಿಸ್ಕೊಥೆಕ್ ಗಳಿಗೆ ಪರೋಕ್ಷ ಬೆಂಬಲ ನೀಡಿದಂತಾಗಿದೆ.

ನಕಲಿ ನೋಟುಗಳ ಹಾವಳಿ

ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನೀಡಿರುವ ಷರತ್ತಿನ ಪ್ರಕಾರ ಅಶ್ಲೀಲ ನೃತ್ಯವನ್ನು ಮಾಡಿಸುವಂತಿಲ್ಲ ಮತ್ತು ಯುವತಿಯರ ಮೇಲೆ ಹಣವನ್ನು ಎರಚುವಂತಿಲ್ಲ. ಹಣ ಎರಚಿದ್ದು ಕಂಡು ಬಂದರೆ ನಿಯಮ ಉಲ್ಲಂಘನೆ ಎಂದು ಪರಿಗಣಿಸಿ ಕಾನೂನು‌ ಕ್ರಮ ಕೈಗೊಳ್ಳಬಹುದು ಹಾಗೂ ಅಂತಹ ಬಾರ್ ಮತ್ತು ಪಬ್ ಗಳ ಪರವಾನಗಿ ರದ್ದುಗೊಳಿಸಬಹುದಾಗಿದೆ.

ಆದರೆ, ಡಾನ್ಸ್ ಬಾರ್ ಗಳಿಗೆ ಲಾಭ ಇರುವುದೇ ಹಣ ಎರಚುವುದು ಮತ್ತು ಅಶ್ಲೀಲ ನೃತ್ಯಗಳಿಂದ, ಪೋಲಿಸರ ದಾಳಿವೇಳೆ ನಾವು ನಿಯಮ ಉಲ್ಲಂಘನೆ ಮಾಡಿಲ್ಲ ಎಂದು ತೋರಿಸಲು ಅಸಲಿ ನೋಟುಗಳ ಬದಲಿಗೆ ನಕಲಿ ನೋಟುಗಳನ್ನು ಎರಚಲಾಗುತ್ತದೆ. ಮೊದಲಿಗೆ ಅಸಲಿ ನೋಟುಗಳನ್ನು ಡಾನ್ಸ್ ಬಾರ್ ನ ಕೌಂಟರ್ ನಲ್ಲಿ ಅಷ್ಟೆ ಮೊತ್ತದ ಅಸಲಿ ನೋಟುಗಳನ್ನು ಪಡೆದು ನಕಲಿ ನೋಟುಗಳನ್ನು ಪಡೆದು ಕೊಳ್ಳುತ್ತಾರೆ. ಡಾನ್ಸ್ ಬಾರ್ ಬಂದ್ ಆದ ಮೇಲೆ‌ ಯುವತಿಯರು ನಕಲಿ ನೋಟುಗಳನ್ನು ಮಾಲೀಕರಿಗೆ ವಾಪಸ್ ನೀಡಿ ಅಷ್ಟೂ ಮೊತ್ತದ  ಅಸಲಿ ನೋಟುಗಳನ್ನು ವಾಪಸ್ ಪಡೆದುಕೊಳ್ಳುತ್ತಾರೆ. ಮಾಲೀಕರು ತಮ್ಮ ಪಾಲಿನ ಹಣ ಇಟ್ಟುಕೊಂಡು ಉಳಿದ ಅಲ್ಪ ಹಣವನ್ನು ಯುವತಿಯರಿಗೆ ಕೊಟ್ಟು ಕಳುಹಿಸುತ್ತಾರೆ.

 

ಫ್ರೆಶ್ ನ್ಯೂಸ್

Latest Posts

Featured Videos