ಇನ್ಮುಂದೆ ಮಾರುಕಟ್ಟೆಗೆ ಬರಲಿದೆ ಬಿದಿರಿನ ಬಾಟಲಿ

ಇನ್ಮುಂದೆ ಮಾರುಕಟ್ಟೆಗೆ ಬರಲಿದೆ ಬಿದಿರಿನ ಬಾಟಲಿ

ನವದೆಹಲಿ, ಸೆ. 30: ನಮ್ಮ ಜಗತ್ತಿನಲ್ಲಿ ಇತ್ತೀಚಿನ ದಿನಗಳಿಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುವುದರಿಂದ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ಹಾನಿಕರ ಎಂಬುವುದು ತಿಳಿದು ಬಂದಿದೆ. ಹೌದು, ಪರಿಸರ ಮಾಲಿನ್ಯದ ಜೊತೆ ಪ್ಲಾಸ್ಟಿಕ್‌, ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಪ್ಲಾಸ್ಟಿಕ್ ನಾಶ ಮಾಡುವುದು ಬಹಳ ಕಷ್ಟ. ಪ್ಲಾಸ್ಟಿಕ್ ಅಡ್ಡ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡಿರುವ ಮೋದಿ ಸರ್ಕಾರ, ಅಕ್ಟೋಬರ್ 2.ರಿಂದ ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಕೆ ಮೇಲೆ ನಿಷೇಧ ಹೇರುತ್ತಿದೆ.

ಮೋದಿ ಸರ್ಕಾರಕ್ಕೆ ಬೆಂಬಲ ನೀಡಲು ಎಂಎಸ್‌ಎಂಇ ಸಚಿವಾಲಯ ಮುಂದಾಗಿದೆ. ಎಂಎಸ್‌ಎಂಇ ಸಚಿವಾಲಯದಡಿ ಕೆಲಸ ನಿರ್ವಹಿಸುವ ಖಾದಿ ಗ್ರಾಮೋದ್ಯೋಗ, ಬಿದರಿನ ಬಾಟಲಿಯನ್ನು ಮಾರುಕಟ್ಟೆಗೆ ತರಲು ಮುಂದಾಗಿದೆ. ಎಂಎಸ್‌ಎಂಇ ಸಚಿವಾಲಯ ಬಿದರಿನ

ಬಾಟಲಿಯನ್ನು ಅಕ್ಟೋಬರ್ ನಲ್ಲಿ ಬಿಡುಗಡೆ ಮಾಡುವ ನಿರ್ಧಾರ ಕೈಗೊಂಡಿದೆ.

 

ಫ್ರೆಶ್ ನ್ಯೂಸ್

Latest Posts

Featured Videos