ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17 ಪ್ರಾರಂಭವಾಗಿ ಕೇಲವೇ ದಿನಗಳು ಮುಗಿದಿದ್ದು ಎಲ್ಲ ಸೀಸನ್ ಗಳಿಗಿಂತ ಈ ಸೀಸನ್ ಅತಿ ಹೆಚ್ಚು ಮನೋರಂಜನೀಯವಾಗಿದೆ ಎಲ್ಲಾ ಸೀಸನ್ ಗಳಿಂದ ಹಲವಾರು ವಿಶೇಷತೆಗಳಿಗೆ ಈ ಸೀಸನ್ ಕಾರಣವಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-17 ರಲ್ಲಿ ಸಿಕ್ಸರ್ಗಳ ಸುರಿಮಳೆಯಾಗುತ್ತಿದೆ. ಮೊದಲಾರ್ಧದ ಪಂದ್ಯಗಳ ಮುಕ್ತಾಯಕ್ಕೂ ಮುನ್ನ 500 ಕ್ಕೂ ಹೆಚ್ಚು ಸಿಕ್ಸ್ಗಳು ಮೂಡಿಬಂದಿವೆ. ಹೀಗಾಗಿ ಈ ಬಾರಿ ಕೂಡ 1000 ಕ್ಕಿಂತಲೂ ಹೆಚ್ಚಿನ ಸಿಕ್ಸ್ಗಳನ್ನು ನಿರೀಕ್ಷಿಸಬಹುದು.
ಸಿಕ್ಸ್ಗಳ ಸುರಿಮಳೆಗೈಯ್ಯುತ್ತಿರುವ ಬ್ಯಾಟರ್ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಸನ್ರೈಸರ್ಸ್ ಹೈದರಾಬಾದ್ ತಂಡದ ಸ್ಪೋಟಕ ದಾಂಡಿಗ ಹೆನ್ರಿಕ್ ಕ್ಲಾಸೆನ್. ಕೇವಲ 6 ಇನಿಂಗ್ಸ್ಗಳಲ್ಲೇ ಕ್ಲಾಸೆನ್ ಒಟ್ಟು 24 ಸಿಕ್ಸ್ಗಳನ್ನು ಬಾರಿಸಿ ಅಬ್ಬರಿಸಿದ್ದಾರೆ.
ಅಂದರೆ ಐಪಿಎಲ್ ಸೀಸನ್ವೊಂದರಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿದ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿದೆ. 2012 ರ ಐಪಿಎಲ್ ಸೀಸನ್ನಲ್ಲಿ ಯೂನಿವರ್ಸ್ ಬಾಸ್ ಗೇಲ್ ಬರೋಬ್ಬರಿ 59 ಸಿಕ್ಸ್ಗಳನ್ನು ಬಾರಿಸಿದ್ದರು. ಈ ಮೂಲಕ ಸೀಸನ್ವೊಂದರಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿ ಬ್ಯಾಟರ್ ಎಂಬ ದಾಖಲೆ ಬರೆದಿದ್ದಾರೆ.
ಇದೀಗ ಕೇವಲ 6 ಪಂದ್ಯಗಳ ಮೂಲಕ ಹೆನ್ರಿಕ್ ಕ್ಲಾಸೆನ್ 24 ಸಿಕ್ಸ್ಗಳನ್ನು ಸಿಡಿಸಿದ್ದಾರೆ. ಇನ್ನು ಲೀಗ್ ಹಂತದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ 8 ಪಂದ್ಯಗಳಿವೆ. ಈ ಪಂದ್ಯಗಳಲ್ಲೂ ಕ್ಲಾಸೆನ್ ಕಡೆಯಿಂದ ಸಿಕ್ಸರ್ಗಳ ಸುರಿಮಳೆಯನ್ನು ನಿರೀಕ್ಷಿಸಬಹುದು.