ಕ್ರಿಸ್ ಗೇಲ್ ದಾಖಲೆ ಮುರಿಯಲು ಹೊರಟ ಕ್ಲಾಸೆನ್

ಕ್ರಿಸ್ ಗೇಲ್ ದಾಖಲೆ ಮುರಿಯಲು ಹೊರಟ ಕ್ಲಾಸೆನ್

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17  ಪ್ರಾರಂಭವಾಗಿ ಕೇಲವೇ ದಿನಗಳು ಮುಗಿದಿದ್ದು  ಎಲ್ಲ ಸೀಸನ್ ಗಳಿಗಿಂತ ಈ ಸೀಸನ್ ಅತಿ ಹೆಚ್ಚು ಮನೋರಂಜನೀಯವಾಗಿದೆ  ಎಲ್ಲಾ ಸೀಸನ್ ಗಳಿಂದ ಹಲವಾರು ವಿಶೇಷತೆಗಳಿಗೆ  ಈ ಸೀಸನ್‌ ಕಾರಣವಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-17 ರಲ್ಲಿ ಸಿಕ್ಸರ್​ಗಳ ಸುರಿಮಳೆಯಾಗುತ್ತಿದೆ. ಮೊದಲಾರ್ಧದ ಪಂದ್ಯಗಳ ಮುಕ್ತಾಯಕ್ಕೂ ಮುನ್ನ 500 ಕ್ಕೂ ಹೆಚ್ಚು ಸಿಕ್ಸ್​ಗಳು ಮೂಡಿಬಂದಿವೆ. ಹೀಗಾಗಿ ಈ ಬಾರಿ ಕೂಡ 1000 ಕ್ಕಿಂತಲೂ ಹೆಚ್ಚಿನ ಸಿಕ್ಸ್​ಗಳನ್ನು ನಿರೀಕ್ಷಿಸಬಹುದು.

ಸಿಕ್ಸ್​ಗಳ ಸುರಿಮಳೆಗೈಯ್ಯುತ್ತಿರುವ ಬ್ಯಾಟರ್​ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಸನ್​ರೈಸರ್ಸ್ ಹೈದರಾಬಾದ್ ತಂಡದ ಸ್ಪೋಟಕ ದಾಂಡಿಗ ಹೆನ್ರಿಕ್ ಕ್ಲಾಸೆನ್. ಕೇವಲ 6 ಇನಿಂಗ್ಸ್​ಗಳಲ್ಲೇ ಕ್ಲಾಸೆನ್ ಒಟ್ಟು 24 ಸಿಕ್ಸ್​ಗಳನ್ನು ಬಾರಿಸಿ ಅಬ್ಬರಿಸಿದ್ದಾರೆ.

ಅಂದರೆ ಐಪಿಎಲ್ ಸೀಸನ್​ವೊಂದರಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿದ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿದೆ. 2012 ರ ಐಪಿಎಲ್ ಸೀಸನ್​ನಲ್ಲಿ ಯೂನಿವರ್ಸ್ ಬಾಸ್ ಗೇಲ್ ಬರೋಬ್ಬರಿ 59 ಸಿಕ್ಸ್​ಗಳನ್ನು ಬಾರಿಸಿದ್ದರು. ಈ ಮೂಲಕ ಸೀಸನ್​ವೊಂದರಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿ ಬ್ಯಾಟರ್ ಎಂಬ ದಾಖಲೆ ಬರೆದಿದ್ದಾರೆ.

ಇದೀಗ ಕೇವಲ 6 ಪಂದ್ಯಗಳ ಮೂಲಕ ಹೆನ್ರಿಕ್ ಕ್ಲಾಸೆನ್ 24 ಸಿಕ್ಸ್​ಗಳನ್ನು ಸಿಡಿಸಿದ್ದಾರೆ. ಇನ್ನು ಲೀಗ್​ ಹಂತದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ತಂಡಕ್ಕೆ 8 ಪಂದ್ಯಗಳಿವೆ. ಈ ಪಂದ್ಯಗಳಲ್ಲೂ ಕ್ಲಾಸೆನ್ ಕಡೆಯಿಂದ ಸಿಕ್ಸರ್​ಗಳ ಸುರಿಮಳೆಯನ್ನು ನಿರೀಕ್ಷಿಸಬಹುದು.

 

ಫ್ರೆಶ್ ನ್ಯೂಸ್

Latest Posts

Featured Videos