ನೀಲಿ ಹಣ್ಣು ತಿಂದರೆ ಬಾಯೆಲ್ಲಾ ನೇರಳೆ ಬಣ್ಣ. ಜೂ.ತಿಂಗಳು ಹಣ್ಣಿನ ಸುಗ್ಗಿಯ ಕಾಲ. ಕಾಲಕ್ಕೆ ಅನುಗುಣವಾಗಿ ಹಣ್ಣು ಸೇವಿಸುವುದರಿಂದ ಆರೋಗ್ಯ ವೃದ್ಧಿಸಿಕೊಳ್ಳಬಹುದು. ಹಾಗಿದ್ದರೆ ನೇರಳೆ ಹಣ್ಣು ಎಲ್ಲಿ ಳೆಯಲಾಗುತ್ತದೆ? ಮಳೆಗಾಲ ಆರಂಭವಾಗಿದ್ದು, ಬೀದಿ ಬೀದಿಯಲ್ಲೂ, ಮನೆಯ ಸುತ್ತ ಮುತ್ತ, ಕಾಡು-ಕಣಿವೆ ಪ್ರದೇಶಗಳಲ್ಲಿ ಹಸಿರು ಮರದಲ್ಲಿ ಜೋತುಬಿದ್ದಿರುವ ನೇರಳೆ ಹಣ್ಣುಗಳು, ನೇರಳೆ ಬೆಳೆ ಕರ್ನಾಟಕದ ಮಲೆನಾಡು ಮತ್ತು ಒಣಹವೆ ಪ್ರದೇಶದಲ್ಲಿ ಬೆಳೆಯಲಾಗುತ್ತದೆ.
ಮರಳು ಮಿಶ್ರಿತ ಫಲವತ್ತಾದ ಮಣ್ಣು ಈ ಬೆಳೆಗೆ ಹೆಚ್ಚು ಸೂಕ್ತ. 30 ಮೀ. ಎತ್ತರ ಬೆಳೆಯುವ ನೇರಳೆ ಮರ ‘ಸಿಜಿಗಿಯಮ್ ಕುಮಿನಿ’ ಎಂಬ ಸಸ್ಯವರ್ಗಕ್ಕೆ ಸೇರಿದೆ. ಮೊದಲೆಲ್ಲಾ ರೈತರು ತಮ್ಮ ಹೊಲಗಳಲ್ಲಿ ಬೇಲಿಸಾಲಿನಲ್ಲಿ ಇವುಗಳನ್ನು ಬೆಳೆಯುತ್ತಿದ್ದರು.