ಈ ಹಣ್ಣಿಂದ ಬಾಯೆಲ್ಲಾ ನೀಲಿ…!

 ಈ ಹಣ್ಣಿಂದ ಬಾಯೆಲ್ಲಾ ನೀಲಿ…!

ನೀಲಿ ಹಣ್ಣು ತಿಂದರೆ ಬಾಯೆಲ್ಲಾ ನೇರಳೆ ಬಣ್ಣ. ಜೂ.ತಿಂಗಳು  ಹಣ್ಣಿನ ಸುಗ್ಗಿಯ ಕಾಲ. ಕಾಲಕ್ಕೆ ಅನುಗುಣವಾಗಿ  ಹಣ್ಣು ಸೇವಿಸುವುದರಿಂದ ಆರೋಗ್ಯ  ವೃದ್ಧಿಸಿಕೊಳ್ಳಬಹುದು.  ಹಾಗಿದ್ದರೆ  ನೇರಳೆ ಹಣ್ಣು ಎಲ್ಲಿ ಳೆಯಲಾಗುತ್ತದೆ?  ಮಳೆಗಾಲ ಆರಂಭವಾಗಿದ್ದು, ಬೀದಿ ಬೀದಿಯಲ್ಲೂ, ಮನೆಯ ಸುತ್ತ ಮುತ್ತ, ಕಾಡು-ಕಣಿವೆ ಪ್ರದೇಶಗಳಲ್ಲಿ ಹಸಿರು ಮರದಲ್ಲಿ ಜೋತುಬಿದ್ದಿರುವ ನೇರಳೆ ಹಣ್ಣುಗಳು, ನೇರಳೆ ಬೆಳೆ ಕರ್ನಾಟಕದ ಮಲೆನಾಡು ಮತ್ತು ಒಣಹವೆ ಪ್ರದೇಶದಲ್ಲಿ ಬೆಳೆಯಲಾಗುತ್ತದೆ.

ಮರಳು ಮಿಶ್ರಿತ ಫಲವತ್ತಾದ ಮಣ್ಣು ಈ ಬೆಳೆಗೆ ಹೆಚ್ಚು ಸೂಕ್ತ. 30 ಮೀ. ಎತ್ತರ ಬೆಳೆಯುವ ನೇರಳೆ ಮರ ‘ಸಿಜಿಗಿಯಮ್ ಕುಮಿನಿ’ ಎಂಬ ಸಸ್ಯವರ್ಗಕ್ಕೆ ಸೇರಿದೆ. ಮೊದಲೆಲ್ಲಾ ರೈತರು ತಮ್ಮ ಹೊಲಗಳಲ್ಲಿ ಬೇಲಿಸಾಲಿನಲ್ಲಿ ಇವುಗಳನ್ನು ಬೆಳೆಯುತ್ತಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos