ನವದೆಹಲಿ, ಜೂನ್.11, ನ್ಯೂಸ್ ಎಕ್ಸ್ ಪ್ರೆಸ್: ಐಸಿಸಿ ಏಕದಿನ ವಿಶ್ವಕಪ್ಕ್ರಿಕೆಟ್ 2019 ಇಂಗ್ಲೆಂಡ್ ಸಾರಥ್ಯದಲ್ಲಿ ನಡೆಯುತ್ತಿದೆ. ಟೀಂ ಇಂಡಿಯಾ ಎರಡು ಪಂದ್ಯಗಳಲ್ಲಿ ಜಯಸಾಧಿಸಿದ್ದು, ಬ್ಯಾಟ್ಸ್ಮೆನ್ ಶಿಖರ್ ಧವನ್ ಹೆಬ್ಬೆರ ಗಾಯದ ಸಮಸ್ಯೆಯಿಂದಾಗಿ ತಂಡದಿಂದ 3ವಾರಗಳ ಕಾಲ ವಿಶ್ರಾಂತಿ ಅವಶ್ಯಕತೆಯಿದೆ.
ಆಸ್ಟ್ರೇಲಿಯಾ ಬೌಲರ್ ನಾಥನ್ ಕೌಲ್ಟರ್-ನೈಲ್ ಎಸೆದ ಬಾಲ್ ಅನ್ನು ಎದುರಿಸುವಾಗ ಶಿಖರ್ ಧವನ್ ಹೆಬ್ಬೆರಳಿಗೆ ಬಾಲ್ ತಗುಲಿ ಗಾಯ ಉಂಟಾಗಿತ್ತು. ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ 122 ರನ್ಗಳನ್ನು ಬಾರಿಸಿ ಶತಕದ ಆಟ ಆಡಿದ್ದರು. ಆಸೀಸ್ ವಿರುದ್ಧದ ಎರಡನೇ ಪಂದ್ಯದಲ್ಲಿ ಶಿಖರ್ ಧವನ್ ಅವರು 109 ಬಾಲ್ಗಳನ್ನು ಎದುರಿಸಿ 117ರನ್ಗಳನ್ನು ಸಿಡಿಸಿ ಶತಕದ ಸಂಭ್ರಮಾಚರಣೆ ಮಾಡಿದರು.