ಆರಂಭಿಕ ಬ್ಯಾಟ್ಸ್ ಮೆನ್ ಶಿಖರ್ ಧವನ್ ಔಟ್

ಆರಂಭಿಕ ಬ್ಯಾಟ್ಸ್ ಮೆನ್ ಶಿಖರ್ ಧವನ್ ಔಟ್

ನವದೆಹಲಿ, ಜೂನ್.11, ನ್ಯೂಸ್ ಎಕ್ಸ್ ಪ್ರೆಸ್: ಐಸಿಸಿ ಏಕದಿನ ವಿಶ್ವಕಪ್​ಕ್ರಿಕೆಟ್​ 2019 ಇಂಗ್ಲೆಂಡ್​ ಸಾರಥ್ಯದಲ್ಲಿ ನಡೆಯುತ್ತಿದೆ. ಟೀಂ ಇಂಡಿಯಾ ಎರಡು ಪಂದ್ಯಗಳಲ್ಲಿ ಜಯಸಾಧಿಸಿದ್ದು, ಬ್ಯಾಟ್ಸ್​ಮೆನ್​ ಶಿಖರ್​ ಧವನ್​ ಹೆಬ್ಬೆರ ಗಾಯದ ಸಮಸ್ಯೆಯಿಂದಾಗಿ ತಂಡದಿಂದ 3ವಾರಗಳ ಕಾಲ ವಿಶ್ರಾಂತಿ ಅವಶ್ಯಕತೆಯಿದೆ.

ಆಸ್ಟ್ರೇಲಿಯಾ ಬೌಲರ್​ ನಾಥನ್ ಕೌಲ್ಟರ್-ನೈಲ್ ಎಸೆದ ಬಾಲ್​ ಅನ್ನು ಎದುರಿಸುವಾಗ ಶಿಖರ್​ ಧವನ್​ ಹೆಬ್ಬೆರಳಿಗೆ ಬಾಲ್​ ತಗುಲಿ ಗಾಯ ಉಂಟಾಗಿತ್ತು. ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ 122 ರನ್​​ಗಳನ್ನು ಬಾರಿಸಿ ಶತಕದ ಆಟ ಆಡಿದ್ದರು. ಆಸೀಸ್​ ವಿರುದ್ಧದ ಎರಡನೇ ಪಂದ್ಯದಲ್ಲಿ ಶಿಖರ್ ಧವನ್​ ಅವರು 109 ಬಾಲ್​ಗಳನ್ನು ಎದುರಿಸಿ 117ರನ್​ಗಳನ್ನು ಸಿಡಿಸಿ ಶತಕದ ಸಂಭ್ರಮಾಚರಣೆ ಮಾಡಿದರು.

ಫ್ರೆಶ್ ನ್ಯೂಸ್

Latest Posts

Featured Videos