ಆನೇಕಲ್, ಮೇ. 17, ನ್ಯೂಸ್ ಎಕ್ಸ್ ಪ್ರೆಸ್ : ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ 6 ವರ್ಷದ ಪೃಥ್ವಿ ಎಂಬ ಗಂಡು ಜೀಬ್ರಾ ಅನಾರೋಗ್ಯದಿಂದ ಮೃತಪಟ್ಟಿದೆ.
ಈ ಜೀಬ್ರಾವನ್ನು 2015ರಲ್ಲಿ ಇಸ್ರೇಲ್ ನಿಂದ ಪ್ರಾಣಿ ವಿನಿಮಯ ಯೋಜನೆಯಡಿ ಈ ಜಿಬ್ರಾವನ್ನು ತರಲಾಗಿತ್ತು. ಜೀಬ್ರಾ ಪೃಥ್ವಿಯು ಗುರುವಾರ ಹೊಟ್ಟೆ ನೋವಿನಿಂದ ಬಳಲಿ ಮೃತಪಟ್ಟಿದೆ. ಮರಣೋತ್ತರ ಪರೀಕ್ಷೆಗಾಗಿ ಹೆಬ್ಬಾಳದ ಇನ್ ಸ್ಟಿ ಟ್ಯೂಟ್ ಆಫ್ ಅನಿಮಲ್ ಹೆಲ್ತ್ ಆ್ಯಂಡ್ ವೆಟರ್ನರಿ ಬಯಾಲಜಿ ಸಂಸ್ಥೆಗೆ ಕಳುಹಿಸಲಾಗಿದೆ ಎಂದು ಉದ್ಯಾನವನ ಕಾರ್ಯನಿರ್ವಕ ನಿರ್ದೇಶಕ ಸಂಜಯ್ ಬಿಜ್ಜೂರು ತಿಳಿಸಿದರು.
ಉದ್ಯಾನದಲ್ಲಿ ನಾಲ್ಕು ಜೀಬ್ರಾಗಳಿದ್ದು. ಈಗ ಮೂರಕ್ಕೆ ಇಳಿದಿದೆ. ಇವುಗಳ ಪೋಷಣೆಗಾಗಿ ಇನ್ಫೋಸಿಸ್ ಪ್ರತಿಷ್ಠಾನ ಪ್ರತ್ಯೇಕ ಆವರಣ ನಿರ್ಮಿಸಿದೆ ಎಂದರು.