9 ಮಂದಿ ದಾರುಣ ಸಾವು

9 ಮಂದಿ ದಾರುಣ ಸಾವು

ಸೌತ್ ಡಕೋಟಾ, ಡಿ. 1 : ವಿಮಾನ ಪತನವಾಗಿ ಎರಡು ಮಕ್ಕಳು ಸೇರಿದಂತೆ ಒಂಬತ್ತು ಜನರು ಮೃತಪಟ್ಟ ಘಟನೆ ಅಮೇರಿಕಾದ ಸೌತ್ ಡಕೋಟಾದಲ್ಲಿ ನಡೆದಿದೆ. ಪಿಲಾಟಸ್ ಪಿಸಿ-12 ವಿಮಾನ ಟೇಕಾಫ್ ಆದ ಕೆಲ ಸಮಯದಲ್ಲೇ ಪತನವಾಗಿದೆ. ವರದಿಯ ಪ್ರಕಾರ ಶನಿವಾರ ಮಧ್ಯಾಹ್ನ 12:30 ಸಮಯದಲ್ಲಿ ಅಪಘಾತವಾಗಿದೆ. ಈ ವಿಮಾನವು ಚೆಂಬರ್ಲೇನ್ ನಿಂದ ಸಿಯೋಕ್ಸ್ ಫಾಲ್ಸ್ ನ ಪಶ್ಚಿಮಕ್ಕೆ ಹೊರಟಿತ್ತು.

ಘಟನೆಯಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿವೆ. ವಿಮಾನದಲ್ಲಿ 12 ಜನರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅನುಕೂಲಕರವಲ್ಲದ ಹವಾಮಾನದ ಹಿನ್ನೆಲೆಯಲ್ಲಿ ಈ ದುರಂತ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ.

ಫ್ರೆಶ್ ನ್ಯೂಸ್

Latest Posts

Featured Videos