85ನೇ ಕನ್ನಡ ಸಾಹಿತ್ಯ ಸಮ್ಮೇಳನ

85ನೇ ಕನ್ನಡ ಸಾಹಿತ್ಯ ಸಮ್ಮೇಳನ

ಕಲಬುರ್ಗಿ, ಫೆ. 05: ಕಲಬುರಗಿ 85 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹರಿದು ಬರುತ್ತಿರುವ ಜನ ಸಾಗರ. ವಿವಿಧ ಜಿಲ್ಲೆಗಳಿಂದ ಕೂಡ ಸಾವಿರಾರು ಸಂಖ್ಯೆಯಲ್ಲಿ ಜನ ಆಗಮನ. ವಿದ್ಯಾರ್ಥಿಗಳು ಕೂಡಾ ಸಾವಿರಾರು ಸಂಖ್ಯೆಯಲ್ಲಿ ಸಮ್ಮೇಳನಕ್ಕೆ ಬರುತ್ತಿದ್ದಾರೆ.

ತೊಗರಿ ಕಣಜದಲ್ಲಿ 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಂಭ್ರಮ ಜೋರಾಗಿದ್ದು, ಅಕ್ಷರಜಾತ್ರೆಗೆ ನಾಡಿನ ವಿವಿಧೆಡೆಗಳಿಂದ ಸಾಹಿತ್ಯಾಸಕ್ತರು ಧಾವಿಸುತ್ತಿದ್ದಾರೆ. ಕಲಬುರ್ಗಿ ವಿಶ್ವವಿದ್ಯಾಲಯದ 35 ಎಕರೆ ವಿಶಾಲ ಆವರಣದಲ್ಲಿ ನುಡಿಜಾತ್ರೆಗೆ ವೇದಿಕೆ ಅನಾವರಣಗೊಂಡಿದ್ದು, ಕನ್ನಡ ಕಲರವ ಮನೆಮಾಡಿದೆ.

ಕನ್ನಡ ಹಬ್ಬ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆಯೇ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಆ ಬಳಿಕ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಪರಿಷತ್ ಧ್ವಜಾರೋಹಣ ನೆರವೇರಿಸಿದ್ದು, ಜಿಲ್ಲಾ ಕಸಾಪ ಅಧ್ಯಕ್ಷ ವೀರಭದ್ರ ಸಿಂಪಿ ನಾಡಧ್ವಜಾರೋಹಣ ನೆರವೇರಿಸಿದರು. ಈ ವೇಳೆ, ಶಾಲಾ ಮಕ್ಕಳು ಗೌರವ ಸಲ್ಲಿಸಿದರು.

ಈ ನಡುವೆ, ಕಲಬುರ್ಗಿಯಲ್ಲಿ ಕನ್ನಡದ ಕಂಪು ಅನಾವರಣಗೊಂಡಿದ್ದು, ಸಾಹಿತ್ಯಾಸಕ್ತರು ಸಡಗರದಿಂದ ನುಡಿಜಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

 

 

ಫ್ರೆಶ್ ನ್ಯೂಸ್

Latest Posts

Featured Videos