807 ರನ್ಸ್, 46 ಸಿಕ್ಸರ್, 64 ಪೋರ್..!

807 ರನ್ಸ್, 46 ಸಿಕ್ಸರ್, 64 ಪೋರ್..!

ಫೆ.28, ನ್ಯೂಸ್ಎಕ್ಸ್ ಪ್ರೆಸ್:  ಇಂಗ್ಲೆಂಡ್​ ಹಾಗು ವೆಸ್ಟ್​ ಇಂಡೀಸ್ ನಡುವಿನ ಏಕದಿನ ಸರಣಿಯ 4ನೇ ಪಂದ್ಯ, ಹಲವು ಮಹತ್ವದ ದಾಖಲೆಗಳಿಗೆ ಸಾಕ್ಷಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್​, ನಾಯಕ ಇಯಾನ್ ಮಾರ್ಗನ್ ಹಾಗು ವಿಕೆಟ್ ಕೀಪರ್​ ಬ್ಯಾಟ್ಸ್​ಮನ್ ಜಾಸ್​ ಬಟ್ಲರ್​ರ ಅಬ್ಬರದ ಆಟದಿಂದಾಗಿ ನಿಗದಿತ 50 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 418 ರನ್​ಗಳ ಬೃಹತ್ ಮೊತ್ತವನ್ನು ದಾಖಲಸಿತು.ಮಾರ್ಗನ್ 88 ಎಸೆತಗಳಲ್ಲಿ 8 ಬೌಂಡರಿ ಹಾಗು 6 ಭರ್ಜರಿ ಸಿಕ್ಸರ್​ ನೆರವಿನಿಂದ, 103 ರನ್ ಬಾರಿಸಿದರು. ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ವಿಂಡೀಸ್ ಬೌಲರ್​ಗಳ ಮೇಲೆ ಬಟ್ಲರ್ ದಂಡಯಾತ್ರೆ ಮಾಡಿದರು. ಕೇವಲ 77 ಎಸೆತಗಳಲ್ಲಿ 12 ಸಿಕ್ಸರ್ ಹಾಗು 13 ಬೌಂಡರಿಗಳಿಂದ ಸರಿಯಾಗಿ 150 ರನ್​ ಸಿಡಿಸಿದರು. ಮೊದಲು 45 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಬಟ್ಲರ್​, ನಂತರ ಜಸ್ಟ್​ 31 ಎಸೆತಗಳಲ್ಲಿ  100 ರನ್ ಬಾರಿಸಿದರು. ಗೆಲುವಿಗಾಗಿ ಬೆಟ್ಟದಂತಹ ಗುರಿ ಬೆನ್ನತ್ತಿದ ವಿಂಡೀಸ್ ಕೂಡ, ರನ್​ ಹೊಳೆಯನ್ನೆ ಹರಿಸಿತು.ಓಪನರ್ ಬ್ಯಾಟ್ಸ್​ಮನ್, ಯೂನಿವರ್ಸಲ್ ಬಾಸ್ ಕ್ರಿಸ್​ ಗೇಲ್, ಅಬ್ಬರಿಸಿದರು. 51 ಎಸತಗಳಲ್ಲಿ ಶತಕದ ಗಡಿ ತಲುಪಿದರು. ಈ ಮೂಲಕ ತಮ್ಮ ಏಕದಿನ ಕ್ರಿಕೆಟ್​ ಕರಿಯರ್​ನಲ್ಲಿ ಅತಿವೇಗದ ಶತಕ ದಾಖಲಿಸಿದರು. 97 ಎಸೆತಗಳನ್ನ ಎದುರಿಸಿದ ಗೇಲ್​ 14 ಭರ್ಜರಿ ಸಿಕ್ಸರ್​ಗಳು, 11 ಬೌಂಡರಿಗಳ ಮೂಲಕ 162 ರನ್​ಗಳನ್ನು ಹೋಡೆದರು. ಆದರೆ  ಗೇಲ್​ರ ಸ್ಫೋಟಕ ಶತಕದಿಂದಾಗಿ,  29 ರನ್​ಗಳಿಂದ ವಿಂಡೀಸ್ ಗೆ ಸೋತು ಶರಣಾದರು.

ಒಟ್ಟು ಪಂದ್ಯದಲ್ಲಿ 46 ಸಿಕ್ಸರ್​ಗಳು ಹರಿದು ಬಂದವು. ವಿಶ್ವಕ್ರಿಕೆಟ್​ನ ಏಕದಿನ ಪಂದ್ಯವೊಂದರಲ್ಲಿ ದಾಖಲಾದ ಅತಿಹೆಚ್ಚು ಸಿಕ್ಸರ್​ಗಳು. ಇದಕ್ಕೂ ಮೊದಲು 2013ರಲ್ಲಿ ಟೀಮ್ ಇಂಡಿಯಾ- ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ ಅತ್ಯಧಿಕ ಸಿಕ್ಸರ್​ಗಳು ದಾಖಲಾಗಿದ್ದವು.

ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು 24 ಸಿಕ್ಸರ್​ ಬಾರಿಸಿತು. ಈ ಮೂಲಕ ಏಕದಿನ ಪಂದ್ಯದಲ್ಲಿ ಅತ್ಯಧಿಕ ಸಿಕ್ಸರ್​ಗಳನ್ನ ಬಾರಿಸಿದ ತಂಡ ಎಂಬ ಹೆಗ್ಗಳಿಕೆ ತನ್ನದಾಗಿಸಿಕೊಂಡಿದೆ. ಅಲ್ಲದೇ ಇದೇ ಸರಣಿಯ ಮೊದಲ ಪಂದ್ಯದಲ್ಲಿ ವಿಂಡೀಸ್ ಬಾರಿಸಿದ್ದ, 23 ಸಿಕ್ಸರ್​ಗಳ​ ದಾಖಲೆಯನ್ನ ಅಳಸಿ ಹಾಕಿತು.

807, ಪಂದ್ಯದಲ್ಲಿ ಒಟ್ಟಾರೆ ದಾಖಲಾದ ರನ್ಸ್. ಇದು ಏಕದಿನ ಮಾದರಿಯ 3ನೇ ಹೈ ಸ್ಕೋರಿಂಗ್ ಮ್ಯಾಚ್​. 2009 ರಲ್ಲಿ ಟೀಮ್ ಇಂಡಿಯಾ- ಆಸ್ಟ್ರೇಲಿಯಾ, 2006ರಲ್ಲಿ ಆಸ್ಟ್ರೇಲಿಯಾ- ಸೌತ್ ಆಫ್ರಿಕಾ ನಡುವಿನ ಪಂದ್ಯಗಳು ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿವೆ. ಇನ್ನು ಜಾಸ್​ ಬಟ್ಲರ್​ 12 ಸಿಕ್ಸರ್ ಬಾರಿಸುವ ಮೂಲಕ, ತಮ್ಮ ಏಕದಿನ ಕ್ರಿಕೆಟ್​ ಕರಿಯರ್​ನ  ಪಂದ್ಯವೊಂದರಲ್ಲಿ ಅತಿಹೆಚ್ಚು ಸಿಕ್ಸರ್​ಗಳನ್ನ ಬಾರಿಸಿ ಸಾಧನೆ ಗೈದರು.ಏಕದಿನ ಕ್ರಿಕೆಟ್​ನಲ್ಲಿ ಇಂಗ್ಲೆಂಡ್​ ಪರ 6 ಸಾವಿರ ರನ್​ ಮೈಲಿಗಲ್ಲು ತಲಪಿದ ಮೊದಲ ಬ್ಯಾಟ್ಸ್​ಮನ್ ಎಂಬ ದಾಖಲೆಗೆ ಇಯಾನ್ ಮಾರ್ಗನ್ ಪಾತ್ರರಾದರು.

ಫ್ರೆಶ್ ನ್ಯೂಸ್

Latest Posts

Featured Videos