ಒಂದೇ ಕುಟುಂಬದ 8 ಜನ ಸಾವು

ಒಂದೇ ಕುಟುಂಬದ 8 ಜನ ಸಾವು

ಬೆಮೆತ್ರಾ, ನ. 22 : ಕಾರೊಂದು ಕೆರೆಗೆ ಬಿದ್ದ ಪರಿಣಾಮ ಒಂದು ಮಗು ಸೇರಿ ಒಟ್ಟು ಎಂಟು ಜನರು ಸಾವನ್ನಪ್ಪಿದ ಘಟನೆ ಇಲ್ಲಿನ ಮೆಹಬೋಟ್ಟಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಚತ್ತೀಸ್ ಗಢ್ ನ ಬೆಮೆತ್ರಾದಲ್ಲಿ ಕಾರಿನಲ್ಲಿ ಒಂದೇ ಕುಟುಂಬದ ಎಂಟು ಜನರು ಪ್ರಯಾಣಿಸುತ್ತಿದ್ದರು. ಕೆರೆಯಿಂದ ಎಲ್ಲಾ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಸ್ಥಳೀಯ ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಸ್ಥಳೀಯ ಜಿಲ್ಲಾಧಿಕಾರಿ ಶಿಖಾ ರಾಜ್ ಪುತ್ ಹೇಳಿದ್ದಾರೆ. ಅಪಘಾತದಲ್ಲಿ ಮೂವರು ಮಹಿಳೆಯರು, ನಾಲ್ಕು ಮಂದಿ ಗಂಡಸರು, ಮತ್ತು ಮಗು ಅಪಘಾತದಲ್ಲಿ ಮೃತರಾಗಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos