70 ಕೋಟಿ ಮದ್ಯ ಮಾರಾಟ!

70 ಕೋಟಿ ಮದ್ಯ ಮಾರಾಟ!

ಬೆಂಗಳೂರು, ಜ. 01:  ಹೊಸ ವರ್ಷ  ಸ್ವಾಗತ ಹಾಗೂ ಸಂಭ್ರಮಾಚರಣೆಯಲ್ಲಿ ವ್ಯಾಪಾರ, ವಹಿವಾಟು ಕಡಿಮೆಯಾಗಿದೆಯೋ ಏನೋ ಗೊತ್ತಿಲ್ಲ. ಆದರೆ, ಮದ್ಯದ ಗಮ್ಮತ್ತೇನೂ ಕಡಿಮೆಯಾಗಿಲ್ಲ

ರಾಜ್ಯದ ಜನರು ಹೊಸ ವರ್ಷದ ಸಂಭ್ರಮಾಚಾರಣೆಗೆ ಇಷ್ಟವಾದ ಉಡುಪು, ಅಲಂಕಾರಿಕ ವಸ್ತುಗಳು, ಆಭರಣಗಳ ಖರೀದಿ, ಇಷ್ಟವಾದ ಹೋಟೆಲ್, ಮಾಲ್, ರೆಸ್ಟೋರೆಂಟ್ಗಳಲ್ಲಿ ಸಂಗೀತ, ನೃತ್ಯ ಮತ್ತಿತರ ಸಾಂಸ್ಕೃತಿಕ ಸಂಭ್ರಮಾಚರಣೆ, ಭಕ್ಷ್ಯ ಭೋಜನಗಳನ್ನು ಸವಿಯಲು ಜನರು ಸಾಕಷ್ಟುಖರ್ಚು ಮಾಡಿದ್ದಾರೆ. ಇದರ ಜತೆಗೆ ಹೊಸ ವರ್ಷವನ್ನು ಬರಮಾಡಿಕೊಂಡ ಸಂಭ್ರಮದ ನಶೆಯಲ್ಲಿ .70 ಕೋಟಿಯಷ್ಟುಮದ್ಯಮಾರಾಟದ ವಹಿವಾಟು ನಡೆದಿದೆ.

ವಿಶೇಷವಾಗಿ ಬೆಂಗಳೂರು, ಮೈಸೂರು, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಶಿವಮೊಗ್ಗ ಮಂಗಳೂರು, ಕಲಬುರಗಿ ಸೇರಿದಂತೆ ಪ್ರಮುಖ ನಗರಗಳು, ಪಟ್ಟಣಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮದ್ಯದ ಬೇಡಿಕೆ ಬಂದಿತ್ತು. ಹೀಗಾಗಿ ಈ ಬಾರಿ ಮದ್ಯದ ಮಾರಾಟ ಕಳೆದ ವರ್ಷಕ್ಕಿಂತ ಹೆಚ್ಚಾಗಬಹುದೆಂದು ಅಬಕಾರಿ ಇಲಾಖೆ ನಿರೀಕ್ಷಿಸಿತ್ತು. ಆದರೆ, ಸದ್ಯ .70 ಕೋಟಿಗೂ ಹೆಚ್ಚಿನ ಮದ್ಯ ಮಾರಾಟ ನಡೆದಿರಬಹುದೆಂದು ಅಂದಾಜು ಮಾಡಲಾಗಿದ್ದು, ವಹಿವಾಟಿನ ಸ್ಪಷ್ಟಮೊತ್ತದ ಲೆಕ್ಕ ಒಂದೆರಡು ದಿನಗಳಲ್ಲಿ ಸಿಗಲಿದೆ ಎಂದು ಹೇಳಲಾಗುತ್ತಿದೆ.

 

ಫ್ರೆಶ್ ನ್ಯೂಸ್

Latest Posts

Featured Videos