7 ವರ್ಷದ ಮಗು ಕೊಂದು ತಾಯಿ ಆತ್ಮಹತ್ಯೆ

7 ವರ್ಷದ ಮಗು ಕೊಂದು ತಾಯಿ ಆತ್ಮಹತ್ಯೆ

ಬೆಂಗಳೂರು, ಆ.6 : ಏಳು ವರ್ಷ ಮಗುವನ್ನು ಕೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಪುಟ್ಟೆನಹಳ್ಳಿಯಲ್ಲಿ ನಡೆದಿದೆ.
ಜ್ಯೋತಿ ಕಟ್ಟಡದಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡ ತಾಯಿ. ಜ್ಯೋತಿ ಕಳೆದ 10 ವರ್ಷಗಳ ಹಿಂದೆ ಪಂಕಜ್ ಎಂಬವರನ್ನು ಮದುವೆಯಾಗಿದ್ದರು. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಜ್ಯೋತಿ ಹಾಗೂ ಪಂಕಜ್ ನಡುವೆ ಗಲಾಟೆ ನಡೆದಿತ್ತು.
ಕೌಟುಂಬಿಕ ಕಲಹದಿಂದ ಬೇಸತ್ತ ಜ್ಯೋತಿ ಮೊದಲು ತನ್ನ ಏಳು ವರ್ಷದ ಮಗಳು ಶಾಬುವನ್ನು ಕೊಲೆ ಮಾಡಿದ್ದಾಳೆ. ಬಳಿಕ ಕಟ್ಟಡದಿಂದ ಜಿಗಿದು ತಾನು ಕೂಡ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಈ ಬಗ್ಗೆ ಪುಟ್ಟೆನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಫ್ರೆಶ್ ನ್ಯೂಸ್

Latest Posts

Featured Videos