7 ವರ್ಷದ ಬಾಲಕನ ಬಾಯಿಯಲ್ಲಿ 527 ಹಲ್ಲುಗಳು ಪತ್ತೆ

7 ವರ್ಷದ ಬಾಲಕನ  ಬಾಯಿಯಲ್ಲಿ 527 ಹಲ್ಲುಗಳು ಪತ್ತೆ

ಚೆನ್ನೈ, ಆ.01 : ಜಗತ್ತಿನಲ್ಲಿ ಏನೆಲ್ಲಾ ವಿಚಿತ್ರ ಘಟನೆಗಳು ನಡೆಯುತ್ತಿವೆ. ಹೌದು  ಪ್ರತಿಯೊಬ್ಬರ ಬಾಯಲ್ಲಿ 32 ಹಲ್ಲುಗಳಿರುತ್ತವೆ. ಕೆಲವರಲ್ಲಿ ಕೋರೆ ಹಲ್ಲುಗಳು ಹುಟ್ಟುಕೊಳ್ಳುತ್ತವೆ. ಆದರೆ, ಚೆನ್ನೈನಲ್ಲಿ ರವೀಂದ್ರನಾಥ್‌ ಎಂಬ ಏಳು ವರ್ಷದ ಬಾಲಕನೊಬ್ಬನ ದವಡೆಯಲ್ಲಿ ವೈದ್ಯರು 527 ಹಲ್ಲುಗಳು ಪತ್ತೆಯಾಗಿವೆ.

ಬಾಲಕನಲ್ಲಿ ಅನೈಸರ್ಗಿಕ ಬೆಳವಣಿಗೆಗೆ ಕಾರಣ ಏನು ಎಂಬುದು ವೈದ್ಯರಿಗೂ ತಿಳಿದುಬಂದಿಲ್ಲ. ಮೊಬೈಲ್‌ ಟವರ್‌ಗಳ ವಿಕಿರಣಗಳು ಮತ್ತು ಆನುವಂಶಿಕ ಕಾರಣಗಳಿಂದ ಹೆಚ್ಚುವರಿ ಹಲ್ಲುಗಳು ಬೆಳೆದಿರಬಹುದು ಎಂದು ವೈದ್ಯರು ಹೇಳಿದ್ದಾರೆ.

ಬಲ ಭಾಗದ ಕೆನ್ನೆ ಊದಿಕೊಂಡಿದ್ದರಿಂದ ನೋವಿನಿಂದ ಬಳಲುತ್ತಿದ್ದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಹಲ್ಲುಗಳು ಹೊರಗಿನಿಂದ ಕಾಣಿಸುತ್ತಿರಲಿಲ್ಲ. ಎಕ್ಸ್‌ರೇ, ಸಿಟಿ ಸ್ಕ್ಯಾನ್ ಮಾಡಿದ ವೇಳೆ ದವಡೆಯ ಮೂಳೆಯ ಕೆಳಭಾಗದಲ್ಲಿ ಚಿಕ್ಕ ಚಿಕ್ಕ ಹಲ್ಲುಗಳು ಬೆಳೆದಿರುವುದು ತಿಳಿಬಂದಿದೆ. ವೈದ್ಯರು ಶಸ್ತ್ರ ಚಿಕಿತ್ಸೆಯ ಮೂಲಕ  ಹಲ್ಲುಗಳನ್ನು ಕಿತ್ತು, ನೈಸರ್ಗಿಕವಾಗಿ ಬೆಳೆದ 21 ಹಲ್ಲುಗಳನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ.  ಹಲ್ಲುಗಳನ್ನು ವೈದ್ಯರು ಶಸ್ತ್ರ ಚಿಕಿತ್ಸೆಯ ಮೂಲಕ ಹೊರತೆಗೆದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos