ಕನಕಪುರದಲ್ಲಿ ಏಳು ಹೆಡೆ ನಾಗಸರ್ಪ ಪತ್ತೆ!

ಕನಕಪುರದಲ್ಲಿ ಏಳು ಹೆಡೆ ನಾಗಸರ್ಪ ಪತ್ತೆ!

ರಾಮನಗರ, ಮೇ.6, ನ್ಯೂಸ್ ಎಕ್ಸ್ ಪ್ರೆಸ್: ತಾಲೂಕಿನ ಉಯ್ಯಂಬಳ್ಳಿ ಹೋಬಳಿ ಮರೀಗೌಡನದೊಡ್ಡಿ ಗ್ರಾಮದಲ್ಲಿ ವಿಸ್ಮಯಕಾರಿಯಾದ ಏಳು ತಲೆ ಸರ್ಪದ ಹಾವಿನ ಪೊರೆ ದೊರೆತಿದ್ದು, ಅದಕ್ಕೆ ಈಗ ಭಕ್ತರಿಂದ ಪೂಜಾ ಕಾರ್ಯ ಪ್ರಾರಂಭವಾಗಿದೆ. ಮರೀಗೌಡನದೊಡ್ಡಿ ಬಳಿಯ ನಿರ್ಜನ ಪ್ರದೇಶದಲ್ಲಿ ಏಳು ತಲೆ ಸರ್ಪದ ಪೊರೆಯೊಂದು ಇರುವುದನ್ನು ಗಮನಿಸಿದವರು, ಗ್ರಾಮದಲ್ಲಿ ಬಂದು ತಿಳಿಸಿದ್ದಾರೆ. ಆಶ್ಚರ್ಯಚಕಿತರಾದ ಜನತೆ ಅದನ್ನು ನೋಡಲು ಗುಂಪು ಗುಂಪಾಗಿ ಹೋಗಿ ನೋಡಿದ್ದಾರೆ. ಮೊದಲಿಗೆ ಅನುಮಾನ ವ್ಯಕ್ತಪಡಿಸಿ ಯಾರೋ ಬೇಕೆಂದು ಪೊರೆಗಳನ್ನು ಸೇರಿಸಿ ಹೀಗೆ ಮಾಡಿರಬಹುದೆಂದು ನೋಡಿದ್ದಾರೆ. ಆದರೆ ವಾಸ್ತವದಲ್ಲಿ ಒಂದು ಪೊರೆಗೆ ಏಳು ತಲೆಯು ಇರುವುದು ಸತ್ಯವಾಗಿ ಕಂಡಾಗ ಜನತೆಗೆ ಇನ್ನಷ್ಟುಆಶ್ಚರ್ಯ ಮತ್ತು ನಾಗದೇವರ ಮೇಲೆ ಭಕ್ತಿ ಹೆಚ್ಚಾಗಿ ಪೂಜೆ ಮಾಡಲು ಶುರುಮಾಡಿದ್ದಾರೆ.  ಗ್ರಾಮದ ಸಮೀಪದಲ್ಲಿ ಏಳು ತಲೆಯ ಸರ್ಪದ ಪೊರೆ ಇದೆ ಎಂದಾದರೆ ಇಲ್ಲಿ ಎಲ್ಲೋ ಸಮೀಪದಲ್ಲೇ ಏಳು ತಲೆಯ ಸರ್ಪವಿರುವುದು ಸತ್ಯ, ಅದನ್ನು ನೋಡಿದರೆ ನಮಗೆ ಪುಣ್ಯ, ಅದೃಷ್ಟಬರುತ್ತದೆ ಎಂಬುದು ಇಲ್ಲಿನ ಜನತೆಯ ನಂಬಿಕೆಯಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos