62 ಲಕ್ಷ ರೂ.ಅಕ್ರಮ ನಗದು ಪತ್ತೆ: ರಮಾನಾಥ್ ರೈಗೆ ಕಂಟಕವಾಗುವುದೇ?

62 ಲಕ್ಷ ರೂ.ಅಕ್ರಮ ನಗದು ಪತ್ತೆ: ರಮಾನಾಥ್ ರೈಗೆ ಕಂಟಕವಾಗುವುದೇ?

ಮಂಗಳೂರು, ಮಾ.6, ನ್ಯೂಸ್ ಎಕ್ಸ್ ಪ್ರೆಸ್: ಕಳೆದ ವಿಧಾನಸಭಾ ಚುನಾವಣೆಯ ವೇಳೆ ಸುಮಾರು 62 ಲಕ್ಷ ರೂ. ಅಕ್ರಮ ನಗದು ಪತ್ತೆಯ ಪ್ರಕರಣ ಈಗ ಮಾಜಿ ಸಚಿವ ರಮಾನಾಥ್ ರೈ ಅವರಿಗೆ ಕಂಟಕವಾಗುವ ಎಲ್ಲಾ ಸಾಧ್ಯತೆಗಳು ಕಂಡುಬರುತಿವೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಮಾನಾಥ ರೈ ಸೇರಿ 6 ಜನರ ವಿರುದ್ಧ ಬಂಟ್ವಾಳ ಜೆಎಂಎಫ್ ಕೋರ್ಟ್ ಸೂಚನೆಯ ಮೇರೆಗೆ ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

2018ನೇ ಸಾಲಿನ ವಿಧಾನಸಭಾ ಚುನಾವಣೆಗೆ ಮೊದಲೇ ಖಚಿತ ಮಾಹಿತಿ ಮೇರೆಗೆ ಆದಾಯ ತೆರಿಗೆ ಆಧಿಕಾರಿಗಳು ಸುಧಾಕರ ಶೆಟ್ಟಿ ಎಂಬುವವರ ಕಚೇರಿ ಮೇಲೆ ದಾಳಿ ನಡೆಸಿ 22 ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದ್ದರು.

ಹಾಗೆಯೇ ಬಂಟ್ವಾಳದ ಬಿ.ಸಿ.ರೋಡ್‍ ನಲ್ಲಿರುವ ಶ್ರೀನಿವಾಸ್ ಲಾಡ್ಜ್ ಮೇಲೆ ದಾಳಿ ಮಾಡಿ ಡೆನ್ಸಿಲ್ ಹರ್ಮನ್ ಎಂಬಾತನಿಂದ 40 ಲಕ್ಷ ರೂ. ನಗದು ಸೇರಿದಂತೆ ಒಟ್ಟು 62 ಲಕ್ಷ ರೂ. ನಗದನ್ನು ಆದಾಯ ತೆರಿಗೆ ಅಧಿಕಾರಿಗಳು ವಶಪಡಿಸಿಕೊಂಡಿದ್ದರು.

ಈ ಪ್ರಕರಣದ ಕುರಿತು ವಿಚಾರಣೆ ನಡೆಸಿದಾಗ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ, ಸಾರ್ವಜನಿಕರಿಗೆ ಹಣವನ್ನು ಹಂಚುವ ಉದ್ದೇಶದಿಂದ ಲೋಕೋಪಯೋಗಿ ಇಲಾಖೆ ಕಾಂಟ್ರಾಕ್ಟರ್ ಸುಧಾಕರ ಶೆಟ್ಟಿ, ಉದಯ್‍ ಹೆಗ್ಡೆ, ಸುಧಾಕರ ಶೆಟ್ಟಿಯ ಸಿಬ್ಬಂದಿಯಾದ ವರುಣ್ ಹಾಗೂ ಪ್ರತೀಶ್, ಸರಕಾರಿ ಉದ್ಯೋಗಿ ಡೆನ್ಸಿಲ್ ಹರ್ಮನ್ ಹಾಗೂ ಮಾಜಿ ಸಚಿವ ರಮನಾಥ ರೈ ಇವರೆಲ್ಲರೂ ಕಾನೂನು ವಿರುದ್ಧ ವ್ಯವಹಾರ ನಡೆಸಿರುವುದು ಕಂಡುಬರುತ್ತದೆ ಎಂಬುದಾಗಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ವರದಿ ಸಲ್ಲಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos