60 ವರ್ಷದ ಮಹಿಳೆ 60 ಸೆಕೆಂಡ್ನಲ್ಲಿ 6 ಇಡ್ಲಿ ಗುಳುಂ!

ಮೈಸೂರು, ಅ. 2 : ಇನ್ನೊಂದು ಇಡ್ಲಿ ಐಸಾ.. ಮತ್ತೊಂದು ಇಡ್ಲಿ ಐಸಾ.. ಇನ್ನಷ್ಟ ಚಟ್ನಿ ಐಸಾ.. ಮತ್ತಷ್ಟ ಸಾಂಬಾರ ಐಸಾ.. ಹಾಗೇ ಮೈಸೂರು ದಸರಾ ನಿಮಿತ್ತ ಮಹಿಳೆಯರಿಗಾಗಿ ಇಡ್ಲಿ ತಿನ್ನುವ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. 60 ವರ್ಷದ ವೃದ್ದ ಮಹಿಳೆಯೊಬ್ಬಳು 60 ಸೆಕೆಂಡ್ ನಲ್ಲಿ 6 ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ ಲಬಕ್.. ಗಬಕ್.. ಎಂದು ಇಡ್ಲಿ ತಿನ್ನುತ್ತಿರುವ ವಿಡಿಯೋ ವೈರಲ್ ಆಗಿದೆ.
ದಸರಾ ವೈಭವ ಈಗಾಗಲೇ ಶುರುವಾಗಿದ್ದು ತನ್ನಿಮಿತ್ತ ಹಲವು ಸ್ಪರ್ಧೆಗಳು ಆಯೋಜನೆಗೊಳ್ಳುತ್ತಿವೆ. ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ದಸರಾ ಸ್ಪರ್ಧೆ, ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಸರೋಜಮ್ಮ ಒಂದು ನಿಮಿಷದಲ್ಲಿ ಆರು ಇಡ್ಲಿಗಳನ್ನು ತಿನ್ನುವ ಮೂಲಕ ಪ್ರಥಮ ಸ್ಥಾನ ಪಡೆದರು.
ಹಾಗೇ ಮೈಸೂರು ದಸರಾ ನಿಮಿತ್ತ ಮಹಿಳೆಯರಿಗಾಗಿ ಇಡ್ಲಿ ತಿನ್ನುವ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಗೆದ್ದವರು 60 ವರ್ಷದ ಮಹಿಳೆ. ಅದೆಷ್ಟು ವೇಗವಾಗಿ ಇಡ್ಲಿ ತಿಂದರು ಗೊತ್ತಾ? ಅವರು ಇಡ್ಲಿ ತಿಂದ ವಿಡಿಯೋ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಸ್ಪರ್ಧೆಯಲ್ಲಿ ಹಲವು ಮಹಿಳೆಯರು ಪಾಲ್ಗೊಂಡಿದ್ದರು. ಒಂದು ನಿಮಿಷದ ಅವಧಿಯಲ್ಲಿ ಅತಿ ಹೆಚ್ಚು ಇಡ್ಲಿ ತಿನ್ನುವವರಿಗೆ ಮೊದಲ ಬಹುಮಾನ ಎಂದು ಘೋಷಿಸಲಾಗಿತ್ತು.

 

ಫ್ರೆಶ್ ನ್ಯೂಸ್

Latest Posts

Featured Videos