ಬರೋಬ್ಬರಿ 6 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ..!

ಬರೋಬ್ಬರಿ 6 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ..!

ಪೋಲೆಂಡ್, ಮೇ. 21, ನ್ಯೂಸ್ ಎಕ್ಸ್ ಪ್ರೆಸ್: ಮಹಾತಾಯಿಯೊಬ್ಬಳು ಏಕಕಾಲಕ್ಕೆ 6 ಮಕ್ಕಳಿಗೆ ಜನ್ಮ ಕೊಟ್ಟ ಘಟನೆ ಪೋಲೆಂಡ್‍ ನಲ್ಲಿ ನಡೆದಿದೆ.ಉತ್ತರ ಪೋಲೆಂಡ್‍ ನ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ಮಹಿಳೆಗೆ ಸಿಜೇರಿಯನ್‍ ಮಾಡಿ ವೈದ್ಯರು ಮಕ್ಕಳನ್ನು ಹೊರ ತೆಗೆದಿದ್ದಾರೆ. ಈ 6 ಜನ ಮಕ್ಕಳಲ್ಲಿ 4 ಹೆಣ್ಣು ಮತ್ತು 2 ಗಂಡು ಮಕ್ಕಳಿವೆ.

7 ತಿಂಗಳಿಗೆ ಹುಟ್ಟಿರುವ ಈ ಮಕ್ಕಳಲ್ಲಿ ಕೆಲವು 890 ಗ್ರಾಂ ಇವೆ ಮತ್ತೆ ಕೆಲವು 1.3 ಕಿಲೋಗ್ರಾಂ ಇವೆ. ಆದರೆ, ಮಕ್ಕಳು ಆರೋಗ್ಯವಾಗಿದ್ದು, ಅವುಗಳು ತೂಕ ಕಡಿಮೆ ಇರುವುದರಿಂದ ಬೆಳವಣಿಗೆಗಾಗಿ ಇನ್ಕ್ಯೂಬೇಟರ್ ನಲ್ಲಿ ಇಡಲಾಗಿದೆ. ಮಹಿಳೆ ಹೊಟ್ಟೆಯಲ್ಲಿ 5 ಮಕ್ಕಳಿವೆ ಎಂದು ಭಾವಿಸಲಾಗಿತ್ತು.‌ ಆದರೆ, ಹೆರಿಗೆ ನಂತರ 6 ಮಕ್ಕಳಿರುವುದು ಗೊತ್ತಾಗಿದೆ ಅಂತಾರೆ ಆಸ್ಪತ್ರೆ ವೈದ್ಯರು.

 

ಫ್ರೆಶ್ ನ್ಯೂಸ್

Latest Posts

Featured Videos