6 ಬೋಗಿಗಳ ಮೆಟ್ರೋ ರೈಲಿಗೆ ಮುಖ್ಯಮಂತ್ರಿ ಎಚ್ಡಿಕೆ ಚಾಲನೆ

6 ಬೋಗಿಗಳ ಮೆಟ್ರೋ ರೈಲಿಗೆ ಮುಖ್ಯಮಂತ್ರಿ ಎಚ್ಡಿಕೆ ಚಾಲನೆ

ಬೆಂಗಳೂರು: 4 ಬೋಗಿಗಳ ಮೆಟ್ರೋಯಿಂದಾಗಿ ನಗರದ ನಾಗರಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಇದರಲ್ಲಿ ಒಂದು ಬೋಗಿಯನ್ನು ಮಹಿಳೆಯರಿಗೆ ಮೀಸಲಿಡಲಾಗುತ್ತದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ನಗರದ ಮಂತ್ರಿ ಸ್ಕ್ವೇರ್ ಬಳಿಯ ಮೆಟ್ರೋ ನಿಲ್ದಾಣದಲ್ಲಿ 6 ಬೋಗಿಗಳ ಮೆಟ್ರೋ ರೈಲಿಗೆ ಚಾಲನೆ ನೀಡಿ ಮಾತನಾಡಿದ ಅವರು, 3 ಬೋಗಿಗಳ ಜೊತೆಗೆ ಹೆಚ್ಚುವರಿಯಾಗಿ 3 ಬೋಗಿಗಳನ್ನು ಅಳವಡಿಕೆ ಮಾಡಲಾಗುತ್ತದೆ. ಇದರಿಂದ ದಿನನಿತ್ಯ ಮೆಟ್ರೋ ಬಳಸುವವರಿಗೆ ಹೆಚ್ಚಿನ ಉಪಯೋಗವಾಗಲಿದೆ ಎಂದು ಹೇಳಿದರು.

ಯಲಚೇನಹಳ್ಳಿಯಿಂದ ನಾಗಸಂದ್ರ ಮಾರ್ಗದಲ್ಲಿ ಮೊದಲ 6 ಬೋಗಿಯ ಮೆಟ್ರೋ ಸಂಚಾರ ಮಾಡುತ್ತಿದ್ದು, ಈ ಹಿಂದೆ ನೇರಳೆ ಮಾರ್ಗದಲ್ಲಿ ಮಾತ್ರ 6 ಬೋಗಿಗಳ ರೈಲು ಸಂಚಾರವಿತ್ತು. ಇದೀಗ ಹಸಿರು ಮಾರ್ಗದಲ್ಲೂ 6 ಬೋಗಿಗಳ ರೈಲನ್ನು ಓಡಿಸಲು ಬಿಎಂಆರ್‍ಸಿಎಲ್ ಮುಂದಾಗಿದೆ. ಹಸಿರು ಮಾರ್ಗದಲ್ಲಿ ಹಚ್ಚು ಜನಸಂದಣಿ ಇರುವ ಸಂದರ್ಭದಲ್ಲಿ (ಪೀಕ್ ಅವರ್) ಮಾತ್ರ ಆರು ಬೋಗಿಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಬೋಗಿಯ ಮೊದಲ ಪ್ರವೇಶದ್ವಾರ ಮಹಿಳೆಯರಿಗೆ ಮೀಸಲಾಗಿದೆ.  3 ಬೋಗಿಗಳ ರೈಲಿನಲ್ಲಿ ಸರಾಸರಿ 975 ಮಂದಿ ಪ್ರಯಾಣಿಸಬಹುದಾಗಿತ್ತು. ಹೆಚ್ಚುವರಿ 3 ಬೋಗಿಗಳ ಜೋಡಣೆಯಿಂದ 2004 ಮಂದಿ ಪ್ರಯಾಣ ಮಾಡಬಹುದಾಗಿದೆ ಎಂದು ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos