‘6-5=2’ ಚಿತ್ರತಂಡ ಮತ್ತೊಂದು ಕಥೆಯತ್ತ

‘6-5=2’ ಚಿತ್ರತಂಡ ಮತ್ತೊಂದು ಕಥೆಯತ್ತ

ಬೆಂಗಳೂರು, ಜೂ .29: ಕನ್ನಡ ಚಿತ್ರರಂಗದಲ್ಲಿ ಇತ್ತಿಚಿನ ದಿನಗಳಲ್ಲಿ ವಿಭಿನ್ನವಾದ ಕಥೆಗಳು ಹೆಚ್ಚು ಬರುತ್ತಿದ್ದಾವೆ. ಹೌದು,  ಚಂದನವನದಲ್ಲಿ ವಿಭಿನ್ನ ಕಥಾಹಂದರಗಳ ಮೂಲಕ ಪ್ರೇಕ್ಷಕರನ್ನು ಸೆಳೆದು, ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿದ ಹೊಸಬರ ಚಿತ್ರಗಳಲ್ಲಿ ‘6-5=2’ ಹಾಗೂ ‘ಕರ್ವ’ ಪ್ರಮುಖವಾಗಿವೆ. ಈ ಚಿತ್ರಗಳ ಮೇಕರ್ಸ್ ಗಳು ಇದೀಗ ‘ದಿಯಾ’ ಮೂಲಕ ಮತ್ತೊಮ್ಮೆ ಕಾಣಿಸಿಕೊಂಡಿದ್ದಾರೆ.

ಹೌದು, ಈ 2  ಚಿತ್ರಗಳ ಮೇಕರ್ಸ್ ಹಾಗೂ ‘6-5=2’ ಚಿತ್ರದ ನಿರ್ದೇಶಕ ಅಶೋಕ್ ಕೆ ಎಸ್ ಈ ಬಾರಿ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಕಥಾಹಂದರವನ್ನು ಬದಿಗಿಟ್ಟು ರೊಮ್ಯಾಂಟಿಕ್ ಕಥೆಯೊಂದಿಗೆ ಬಂದಿದ್ದಾರೆ. ಚಿತ್ರಕ್ಕೆ ‘ದಿಯಾ’ ಎಂದು ಹೆಸರಿಟ್ಟಿದ್ದು, ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ.

‘ದಿಯಾ’ ಚಿತ್ರವನ್ನು ಅಶೋಕ್ ಕೆ ಎಸ್ ನಿರ್ದೇಶನ ಮಾಡುತ್ತಿದ್ದು, ಚಿತ್ರದ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಬಿಡುಗಡೆಯಾಗಿರುವ ‘ದಿಯಾ’ ಚಿತ್ರದ ಫಸ್ಟ್ ಲುಕ್ ಎಲ್ಲರ ಗಮನ ಸೆಳೆಯುತ್ತಿದ್ದು, ಚಿತ್ರವನ್ನು ಫ್ಯಾಮಿಲಿ ಫಿಲ್ಮಂ ಫ್ಯಾಕ್ಟರಿಯಲ್ಲಿ ಕೃಷ್ಣ ಚೈತನ್ಯ ನಿರ್ಮಾಣ ಮಾಡುತ್ತಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos