ಅಬ್ಬಾ!ಇದು ಹೊಟ್ಟೆಯೋ?ಮೊಳೆ ಅಂಗಡಿಯೋ?

ಅಬ್ಬಾ!ಇದು ಹೊಟ್ಟೆಯೋ?ಮೊಳೆ ಅಂಗಡಿಯೋ?

ರಾಜಸ್ಥಾನ, ಮೇ.14, ನ್ಯೂಸ್ ಎಕ್ಸ್ ಪ್ರೆಸ್ :  ವ್ಯಕ್ತಿಯೊಬ್ಬರ ಹೊಟ್ಟೆಯಿಂದ 116 ಕಬ್ಬಿಣದ ಮೊಳೆಗಳು, ಪೆಲ್ಲೆಟ್‌ಗಳು ಹಾಗೂ ಉದ್ದದ ತಂತಿಯನ್ನು ಹೊರತೆಗೆದ  ವಿಚಿತ್ರ ಘಟನೆ ರಾಜಸ್ಥಾನದ ಬುಂಡಿಯಲ್ಲಿ ನಡೆದಿದೆ.

ಘಟನೆ ವಿವರ : ಭೋಲಾ ಶಂಕರ್‌ ಎಂಬ ರೋಗಿ ಕಳೆದ ಕೆಲವು ದಿನಗಳ ಹಿಂದೆ ಸರಕಾರಿ ಆಸ್ಪತ್ರೆಗೆ ತೀವ್ರ ಹೊಟ್ಟೆ ನೋವು ಎಂದು ಚೆಕಪ್‌ಗೆ ಹೋಗಿದ್ದಾರೆ.  ವೈದ್ಯರು ಎಕ್ಸ್ ರೇ ಹಾಗೂ ಸಿಟಿ ಸ್ಕ್ಯಾನ್‌ ಮಾಡಿದಾಗ ಹೊಟ್ಟೆಯಲ್ಲಿ   6.5 ಸೆಂಟಿಮೀಟರ್‌ಗಳಷ್ಟು ಅಳತೆಯ ಮೊಳೆಗಳು, ಪೆಲ್ಲೆಟ್‌ಗಳು ಹಾಗೂ ಉದ್ದದ ತಂತಿಗಳನ್ನು ಕಾಣಿಸಿವೆ. ತಕ್ಷಣ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು ಎಲ್ಲವನ್ನುಹೊರತೆಗಿದ್ದಾರೆ. ಈ ಬಗ್ಗೆ ಸ್ವತ: ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ  ಡಾ. ಅನಿಲ್ ಸೈನಿ ಪಿಟಿಐಗೆ ಮಾಹಿತಿ ನೀಡಿದ್ದಾರೆ. ಹಿಂದೆ 2017ರಲ್ಲೂ ಫರಿದಾಬಾದ್‌ನಲ್ಲೂ  ವೈದ್ಯರು 56 ವರ್ಷದ ವ್ಯಕ್ತಿಯ ಹೊಟ್ಟೆಯಿಂದ ಸುಮಾರು 150 ಸೂಜಿಗಳು ಹಾಗೂ ಮೊಳೆಗಳನ್ನು ಹೊರತೆಗೆದಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos