ಬತ್ತಿದ ಭೂತಾಯಿಯ ಒಡಲು..!

ಬತ್ತಿದ ಭೂತಾಯಿಯ ಒಡಲು..!

 ಬೆಂಗಳೂರು, ಮೇ. 21, ನ್ಯೂಸ್ ಎಕ್ಸ್ ಪ್ರೆಸ್: ಮುಂಗಾರು ಮತ್ತು ಹಿಂಗಾರು ಅವಧಿಯಲ್ಲಿ ವಾಡಿಕೆಯಷ್ಟು ಮಳೆ ಬಾರದಿರುವುರಿಂದ ಅಂತರ್ಜಲ ಸ್ಥಿರಮಟ್ಟ ಗಣನೀಯವಾಗಿ ಕುಸಿಯುತ್ತಿದ್ದು, 5 ವರ್ಷಗಳ ಅವಧಿಯಲ್ಲಿ ರಾಜ್ಯದ ಒಟ್ಟು ‘176 ತಾಲ್ಲೂಕಗಳ ಪೈಕಿ 100 ಅಂತರ್ಜಲ ಸ್ಥಿರ ಮಟ್ಟ ಕುಸಿತ’ ವಾಗಿದೆ. ಅಂತರ್ಜಲ ಮಟ್ಟ ತೀವ್ರ ಕುಸಿದ ಹಿನ್ನಲೆಯಲ್ಲಿ ಕೇಂದ್ರಿಯ ಅಂತರ್ಜಲ ಮಂಡಳಿಯ ನಿರ್ದೇಶನದಂತೆ 45 ತಾಲ್ಲೂಕಗಳನ್ನು ಶೀಘ್ರದಲ್ಲೇ ಅಂತರ್ಜಲ ‘ಅತಿ ಬಳಕೆ’ ತಾಲ್ಲೂಕುಗಳು ಎಂದು ಘೋಷಿಸಿ ರಾಜ್ಯ ಅಂತರ್ಜಲ ಪ್ರಾಧಿಕಾರ ಅಧಿಸೂಚನೆ ಹೊರಡಿಸಿದೆ.

ಎಲ್ಲೆಲ್ಲೂ ನೀರಿಗೆ ಹಾಹಾಕಾರ..! 

5 ವರ್ಷಗಳ ವಾರ್ಷಿಕ ಸರಾಸರಿ ಗಮನಿಸಿ 76 ತಾಲ್ಲೂಕುಗಳಲ್ಲಿ ಮಾತ್ರ ಏರಿಕೆ ಕಂಡುಬಂದಿದೆ. ಅದರಲ್ಲೂ ರಾಮನಗರ ಜಿಲ್ಲೆಯ 4 ತಾಲ್ಲೂಕುಗಳು ಮತ್ತು ಬೆಂಗಳೂರು ನಗರ ಜಿಲ್ಲೆಯ ಉತ್ತರ ತಾಲ್ಲೂಕ ಬಿಟ್ಟರೆ, ಉಳಿದ ಕಡೆಗೆಗಳಲ್ಲಿ ಅಲ್ಲ ಪ್ರಮಾಣದ ಏರಿಕೆಯಾಗಿದೆ. ಕೋಲಾರ ಜಿಲ್ಲೆಯಾದ್ಯಂತ ಅತೀ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಸ್ಥಿರ ಮಟ್ಟ ಪಾತಳಕ್ಕಿಳಿದಿದೆ. ಕೋಲಾರ ತಾಲೂಕಿನಲ್ಲಿ 2013-17 ಅವಧಿ ಅಂತರ್ಜಲ ಸ್ಥಿರಮಟ್ಟ 62.54 ಮೀಟರ್ ಇತ್ತು. ಇದು ಈಗ 83.49 ಮೀಟರ್ (20.95 ಮೀಟರ್) ಕೆಳಕ್ಕೆ ಇಳಿದಿದೆ. ರಾಯಚೂರು,ಧಾರವಾಡ, ಹಾಸನ್, ತುಮಕೂರು,ಚಿಕ್ಕಬಳ್ಳಾಪುರ, ಚಾಮರಾಜ ನಗರ ಜಿಲ್ಲೆಗಳಲ್ಲಿ ಸ್ಥಿತಿಯೂ ಕಳವಳಕ್ಕೀಡು ಮಾಡುವಂತಿದೆ.

ಫ್ರೆಶ್ ನ್ಯೂಸ್

Latest Posts

Featured Videos