5ನೇ  ಟೆಸ್ಟ್ ಪಂದ್ಯದಿಂದಲೂ ಹೊರಬಿದ್ದ ಕನ್ನಡಿಗ ಔಟ್

5ನೇ  ಟೆಸ್ಟ್ ಪಂದ್ಯದಿಂದಲೂ ಹೊರಬಿದ್ದ ಕನ್ನಡಿಗ ಔಟ್

ಬೆಂಗಳೂರು: ಭಾರತ ಹಾಗೂ ಇಂಗ್ಲೆಂಡ್‌ ವಿರುದ್ದ 5 ಟೆಸ್ಟ್‌ ಪಂದ್ಯಗಳಲ್ಲಿ ಭಾರತ ಈಗಾಗಲೇ 4 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು ಈ ಪಂದ್ಯಗಳಲ್ಲಿ ಭಾರತ 3-1 ಅಂತರದಿಂದ ಟೆಸ್ಟ್‌ ಪಂದ್ಯವನ್ನು ವಶಪಡಿಸಿಕೊಂಡಿದೆ.

ಹೈದರಾಬಾದ್​ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ವೇಳೆ ಇಂಜುರಿಗೊಂಡು ಟೀಂ ಇಂಡಿಯಾದಿಂದ ಹೊರಗಿರುವ ಕನ್ನಡಿಗ ಕೆಎಲ್ ರಾಹುಲ್, ಐದನೇ ಟೆಸ್ಟ್ ಪಂದ್ಯದಿಂದಲೂ ಹೊರಬಿದ್ದಿದ್ದಾರೆ ಎಂದು ಬಿಸಿಸಿಐ ಮಾಹಿತಿ ನೀಡಿದೆ.

ವಾಸ್ತವವಾಗಿ ಎರಡನೇ ಟೆಸ್ಟ್​ ಪಂದ್ಯದಿಂದ ಹೊರಗುಳಿದಿದ್ದ ರಾಹುಲ್, ಮೂರನೇ ಟೆಸ್ಟ್ ವೇಳೆಗೆ ಚೇತರಿಸಿಕೊಂಡು ತಂಡಕ್ಕೆ ಮರಳುತ್ತಾರೆ ಎಂದು ಹೇಳಲಾಗಿತ್ತು. ಅದರಂತೆ ರಾಹುಲ್ ಅಭ್ಯಾಸ ಕೂಡ ಆರಂಭಿಸಿದ್ದರು. ಆದರೆ ಅವರನ್ನು ಮೂರನೇ ಟೆಸ್ಟ್​ನಿಂದ, ಆ ನಂತರ 4ನೇ ಟೆಸ್ಟ್​ನಿಂದಲೂ ಹೊರಗಿಡಲಾಗಿತ್ತು.

ಪ್ರಸ್ತುತ ಕೆಎಲ್ ರಾಹುಲ್ ಐದನೇ ಟೆಸ್ಟ್‌ನಿಂದಲೂ ಹೊರಗುಳಿದಿದ್ದಾರೆ ಎಂದು ಮಾಹಿತಿ ನೀಡಿರುವ ಬಿಸಿಸಿಐ, ರಾಹುಲ್ ಇನ್ನೂ ಫಿಟ್ ಆಗಿಲ್ಲ. ಸದ್ಯ ಈ ಆಟಗಾರ ಲಂಡನ್​ನಲ್ಲಿದ್ದು, ವೈದ್ಯಕೀಯ ತಂಡ ಅವರ ಫಿಟ್ನೆಸ್ ಮೇಲೆ ಕಣ್ಣಿಟ್ಟಿದೆ ಎಂದು ಬಿಸಿಸಿಐ ಮಾಹಿತಿ ನೀಡಿದೆ.

 

ಫ್ರೆಶ್ ನ್ಯೂಸ್

Latest Posts

Featured Videos