500ಅಡಿಯಿಂದ ಬಿದ್ದು, ಅಪಾಯದಿಂದ ಪಾರು

500ಅಡಿಯಿಂದ ಬಿದ್ದು, ಅಪಾಯದಿಂದ ಪಾರು

ವಾಷಿಂಗ್ಟನ್, ಜ. 3 : ಭಾರತ ಮೂಲದ 16 ವರ್ಷ ವಯಸ್ಸಿನ ಕೆನಡಾ ಪರ್ವತಾರೋಹಿ ಪರ್ವತಾರೋಹಣ ಮಾಡುವಾಗ 500 ಅಡಿಯಿಂದ ಕೆಳಗೆ ಬಿದ್ದಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಗುರ್ಬಾಜ್ ಸಿಂಗ್ ತಮ್ಮ 90ನೇ ಪರ್ವತಾರೋಹಣಕ್ಕಾಗಿ ಅಮೆರಿಕ ಕರಾವಳಿಯ ಅತಿ ಎತ್ತರದ ಪರ್ವತ ಮೌಂಟ್ ಆರೆಗಾನ್ (11,240 ಅಡಿ) ಹತ್ತುತ್ತಿದ್ದರು. ಆಗ ಕಾಲು ಜಾರಿ 500 ಅಡಿ ಕೆಳಗೆ ಬಿದ್ದರು. ಅಪಾಯಕಾರಿ ಜಾಗದಲ್ಲಿ ಬಿದ್ದ ಕಾರಣ, ಅವರ ಕಾಲು ಮುರಿದಿದೆ. ಶೋಧ ಮತ್ತು ರಕ್ಷಣಾ ತಂಡ ಅವರಿದ್ದಲ್ಲಿಗೆ ಧಾವಿಸಿ ಅವರನ್ನು ರಕ್ಷಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos