ಜ್ವರದಿಂದ 5 ವರ್ಷದ ಬಾಲಕ ಮೃತ

ಜ್ವರದಿಂದ  5 ವರ್ಷದ ಬಾಲಕ ಮೃತ

ಬೆಳಗಾವಿ, ಸೆ. 10 : ರಾಮದುರ್ಗ ತಾಲುಕಿನ ಸುರೇಬಾನ ಗಂಜಿ ಕೆಂದ್ರದಲ್ಲಿ ಜ್ವರದಿಂದ ಬಳಲುತ್ತಿದ್ದ ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ನಡೆದಿದೆ. 5 ವರ್ಷದ ಬಾಲಕ ಅಬ್ದುಲ್ ಸಾಬ್ ದುರ್ದೈವಿ.
ದೊಡ್ಡ ಹಂಪಿಹೊಳಿ ಗ್ರಾಮದಲ್ಲಿ ನೆರೆ ಹಾವಳಿಯಿಂದ ಮನೆ ಬಿದ್ದಿರುವ ಕಾರಣ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾನ್ ಗ್ರಾಮದ ಎಪಿಎಂಸಿ ಆವರಣದಲ್ಲಿ ಬಾಲಕನ ಕುಟುಂಬದವರು ವಾಸವಿದ್ದರು. ರಾಮದುರ್ಗ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ವೈದ್ಯರ ನಿರ್ಲಕ್ಷದಿಂದ ಬಾಲಕ ಮೃತಪಟ್ಟಿದ್ದಾನೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
5 ಲಕ್ಷ ಪರಿಹಾರ ಘೋಷಣೆ
ರಾಮದುರ್ಗದ ಸುರೇಬಾನ ಕಾಳಜಿ ಕೇಂದ್ರದಲ್ಲಿ ಮೃತಪಟ್ಟ 5 ವರ್ಷದ ಬಾಲಕನ ಕುಟುಂಬಸ್ಥರಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ 5 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos