ಐದು ಮತ ಪಡೆದ ಅಭ್ಯರ್ಥಿ ಕಣ್ಣೀರು.!

ಐದು ಮತ ಪಡೆದ ಅಭ್ಯರ್ಥಿ ಕಣ್ಣೀರು.!

ಪಂಜಾಬ್, ಮೇ. 24, ನ್ಯೂಸ್ ಎಕ್ಸ್ ಪ್ರೆಸ್: 2019ರ ಲೋಕಸಭಾ ಚುನಾವಣೆಲ್ಲಿ ನರೇಂದ್ರ ಮೋದಿಯವರ ಅಲೆಯ ಎದುರು ಪ್ರತಿಪಕ್ಷಗಳು ಕೊಚ್ಚಿ ಹೋಗಿವೆ. ಹೌದು, ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಕೆಲ ರಾಜ್ಯಗಳಲ್ಲಿ ಖಾತೆಯನ್ನೇ ತೆರೆಯಲು ವಿಫಲವಾಗಿದೆ.

ಇದರ ಮಧ್ಯೆ ಬಹು ನಿರೀಕ್ಷೆಯಿಂದ ಕಣಕ್ಕಿಳಿದಿದ್ದ ಪಕ್ಷೇತರ ಅಭ್ಯರ್ಥಿಯೊಬ್ಬರು ಕೇವಲ 5 ಮತಗಳನ್ನು ಪಡೆದಿದ್ದಾರೆ. ಆ ಬಳಿಕ ಎಲ್ಲರ ಮನ ಕರಗುವಂತೆ ಅವರು ಕಣ್ಣೀರಿಟ್ಟಿದ್ದು, ಇದರ ನೈಜ ಕಾರಣ ತಿಳಿದ ಸಾರ್ವಜನಿಕರು ದಂಗಾಗಿದ್ದಾರೆ.

ಪಂಜಾಬ್ ನ ಜಲಂಧರ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಪಕ್ಷೇತರ ಅಭ್ಯರ್ಥಿ ಈ ರೀತಿ ಕಣ್ಣೀರಿಟ್ಟಿದ್ದು, ಅವರು 5 ಮತ ಗಳಿಸಿದ್ದಕ್ಕಿಂತ ಹೆಚ್ಚಾಗಿ ತಮ್ಮ ಮನೆಯಲ್ಲಿ 9 ಜನ ಮತದಾರರಿದ್ದು, ಅವರೂ ಕೂಡ ಮತ ಹಾಕಿಲ್ಲವೆಂಬುದು ಈ ಅಭ್ಯರ್ಥಿಯ ದುಃಖಕ್ಕೆ ಕಾರಣವಾಗಿದೆ. ಇದರ ಜೊತೆಗೆ ಅವರು ವಿದ್ಯುನ್ಮಾನ ಮತಯಂತ್ರಗಳ ಮೇಲೂ ಅನುಮಾನ ವ್ಯಕ್ತಪಡಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos