4700 ಕೋಟಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿದ್ದ ವಂಚಕನ ಅರೆಸ್ಟ್

4700 ಕೋಟಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿದ್ದ ವಂಚಕನ ಅರೆಸ್ಟ್

ಮಾ. 23, ನ್ಯೂಸ್ ಎಕ್ಸ್ ಪ್ರೆಸ್:  ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳಿಗೆ 8100 ಕೋಟಿ ರೂ ವಂಚಿಸಿ ವಿದೇಶಕ್ಕೆ ಪರಾರಿಯಾಗಿದ್ದ ಸ್ಟರ್ಲಿಂಗ್ ಬಯೋಟೆಕ್ ಗ್ರೂಪ್ ಪಾಲುದಾರ ಹಿತೇಶ್ ಪಟೇಲ್ ಎಂಬಾತನನ್ನು ಯುರೋಪಿನ ಟಿರಾನಾ ದೇಶದ ಅಲ್ಬೇನಿಯಾದಲ್ಲಿ ಬಂಧಿಸಲಾಗಿದೆ.

ಈತನ ಬಂಧನಕ್ಕಾಗಿ ಮಾ. 11ರಂದು ರೆಡ್ ಕಾರ್ನರ್ ನೋಟಿಸ್ ಹೊರಡಿಸಲಾಗಿತ್ತು.

ಹಿತೇಶ್ ಪಟೇಲ್ ಪಾಲುದಾರಿಕೆಯ ಸ್ಟರ್ಲಿಂಗ್ ಬಯೋಟೆಕ್ ಗ್ರೂಪ್, ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಾದ ಯುಕೋ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಇಂಡಿಯಾ ಹಾಗೂ ಆಂಧ್ರ ಬ್ಯಾಂಕ್ ಗಳಲ್ಲಿ 4700 ಕೋಟಿ ರೂಪಾಯಿ ಸಾಲ ಮಾಡಿದ್ದು, ಇದು ಈಗ 8100 ಕೋಟಿ ರೂಗೆ ತಲುಪಿದೆ. ಆ ಬಳಿಕ ಹಿತೇಶ್ ಪಟೇಲ್ ಕುಟುಂಬ ಸಮೇತ ವಿದೇಶಕ್ಕೆ ಪರಾರಿಯಾಗಿದ್ದು, ಇದೀಗ ಬಂಧನಕ್ಕೊಳಗಾಗಿರುವ ಆತನನ್ನು ಭಾರತಕ್ಕೆ ವಾಪಸ್ ಕರೆತರಲು ಪ್ರಕ್ರಿಯೆ ನಡೆಸಲಾಗುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos