40 ದಿನಗಳಲ್ಲಿ 260ಅಡಿ ಉದ್ದದ ಸೇತುವೆ ನಿರ್ಮಿಸಿ ಭಾರತೀಯ ಸೇನೆ

40 ದಿನಗಳಲ್ಲಿ 260ಅಡಿ ಉದ್ದದ ಸೇತುವೆ ನಿರ್ಮಿಸಿ ಭಾರತೀಯ ಸೇನೆ

ಶ್ರೀನಗರ, . 5, ನ್ಯೂಸ್ ಎಕ್ಸ್ ಪ್ರೆಸ್:  ಭಾರತೀಯ ಸೇನೆ ಇಂಡಸ್ ನದಿ ಮೇಲೆ 260ಅಡಿ ಉದ್ದದ ತೂಗು ಸೇತುವೆಯನ್ನ ಕೇವಲ 40 ದಿನಗಳಲ್ಲಿ ನಿರ್ಮಿಸಿ ದಾಖಲೆ ಬರೆದಿದೆ.

ಈ 500 ಟನ್ ತೂಕದ, ನೂತನ ಸೇತುವೆಗೆ ‘ಮೈತ್ರಿ ಬ್ರಿಡ್ಜ್’ ಎಂದು ಹೆಸರಿಡಲಾಗಿದೆ. ಈ ಸೇತುವೆ ನಿರ್ಮಾಣದ ಉಸ್ತುವಾರಿಯನ್ನ ಫಾಸ್ಟ್ ಅಂಡ್ ಫ್ಯೂರಿ ಸೇನಾ ದಳದ, ‘ಸಾಹಸ್ ಅವರ್ ಯೋಗ್ಯತಾ’ ಎಂಬ ಸೇನಾ ತುಕಡಿಯ ಇಂಜಿನಿಯರ್ಗಳು ವಹಿಸಿದ್ದರು.

ಇಲ್ಲಿನ ಸೈನಿಕರು ಮತ್ತು ಸ್ಥಳೀಯರ ನಡುವಿನ ಸಂಬಂಧಗಳನ್ನ ವೃದ್ಧಿಸಲು ಈ ಸೇತುವೆಗೆ ‘ಮೈತ್ರಿ’ ಸೇತುವೆ ಎಂದು ಹೆಸರಿಡಲಾಗಿದೆ. ‘ಮೈತ್ರಿ ಬ್ರಿಡ್ಜ್’ ಲೇಹ್ -ಲಡಾಖ್ ಪ್ರದೇಶದ, ಚೋಗ್ಲಾಸಮರ್, ಸ್ಟೋಕ್, ಚುಚೋಟ್ ಎಂಬ ಕಣಿವೆ ಪ್ರದೇಶದ ದೊಡ್ಡ ಗ್ರಾಮಗಳ ಸ್ಥಳೀಯರ ನಡುವಿನ ಸಂಪರ್ಕವನ್ನ ಬೆಳೆಸಲು ಸಹಕಾರಿಯಾಗಿದೆ ಎಂದು ಸ್ಥಳಿಯರು ಸಾಮಾಜಿಕಾ ಜಾಲತಾಣಗಳಲ್ಲಿ ತಮ್ಮ ಸಂತಸವನ್ನ ವ್ಯಕ್ತಪಡಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos